ಅಯೋಧ್ಯೆಯಲ್ಲಿ ಹೋಳಿ ಆಚರಣೆ ಮುಗಿಸಿ ಬೈಕಿನಲ್ಲಿ ಹಿಂದಿರುಗುತ್ತಿದ್ದ ನಾಲ್ವರು, ವೇಗವಾಗಿ ಬಂದ ಎಸ್‌ಯುವಿ ಕಾರಿಗೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ. ಶುಕ್ರವಾರ ಸಂಜೆ ಪರಾರಾಮ್‌ಪುರ ಗ್ರಾಮದ ಬಳಿ ಈ ದುರ್ಘಟನೆ ಸಂಭವಿಸಿದೆ.
ಡಿಕ್ಕಿಯ ನಂತರ, ಕಾರು, ಬೈಕ್‌ಗಳನ್ನು ನೂರು ಮೀಟರ್‌ಗಳಷ್ಟು ಎಳೆದೊಯ್ಯುತ್ತಾ ಪರಾರಿಯಾಗಲು ಪ್ರಯತ್ನಿಸಿತು. ಇದರಿಂದ ಬೈಕ್‌ಗಳು ಬೆಂಕಿಗೆ ಆಹುತಿಯಾದವು. ಕೋಪಗೊಂಡ ಗ್ರಾಮಸ್ಥರು ಕಾರಿಗೆ ಬೆಂಕಿ ಹಚ್ಚಿದರು. ನಂತರ ಬಂಧಿಸಲಾದ ಕಾರು ಚಾಲಕ ಕೂಡ ಘಟನೆಯಲ್ಲಿ ಗಾಯಗೊಂಡಿದ್ದಾನೆ.
ರಾಮ್ ಕೇವಲ್ (50), ಇಂದ್ರಜೀತ್ (32), ರಾಮ್ ಸಜೀವನ್ (42) ಮತ್ತು ಜೇತು (38) ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.