
ಲಕ್ನೋ: ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಹೋಳಿ ಸಂಭ್ರಮಾಚರಣೆಯಲ್ಲಿ ಭಾಗವಹಿಸಲು ಒಂಟೆಯ ಮೇಲೆ ಆಗಮಿಸಿ ಗಮನಸೆಳೆದಿದ್ದಾರೆ.
ಉತ್ತರ ಪ್ರದೇಶದಲ್ಲಿ ಹಲವಾರು ಬಿಜೆಪಿ ನಾಯಕರು ಹೋಳಿಯನ್ನು ಅತ್ಯಂತ ಉತ್ಸಾಹದಿಂದ ಆಚರಿಸಿದರು. ಹೋಳಿಯ ಸಾಂಸ್ಕೃತಿಕ ಮಹತ್ವವನ್ನು ಪ್ರತಿಬಿಂಬಿಸುವ ಸಂಗೀತ, ನೃತ್ಯ ಸಂಭ್ರಮಾಚರಣೆಯಂತೂ ಮುಗಿಲು ಮುಟ್ಟಿತ್ತು.
ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಪಾಠಕ್ ಅವರು ಹೋಳಿ ಸಂದರ್ಭದಲ್ಲಿ ರಾಜ್ಯದ ಜನರಿಗೆ ಶುಭಾಶಯಗಳನ್ನು ಕೋರಿದ್ದು, ಆಚರಣೆಗಳ ನಡುವೆ ಇರುವ ಸಾಮರಸ್ಯವನ್ನು ತಿಳಿಸಿದ್ದಾರೆ. ಅಲ್ಲದೇ ಒಂಟೆ ಸವಾರಿ ಮಾಡಿ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.
ಬಣ್ಣಗಳ ಹಬ್ಬ ಎಂದೂ ಕರೆಯಲ್ಪಡುವ ಹೋಳಿ ಹಬ್ಬವು, ವಸಂತಕಾಲದ ಆಗಮನ, ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯ ಮತ್ತು ಜೀವನದ ಸಂತೋಷವನ್ನು ಆಚರಿಸಲು ಜನರು ಒಟ್ಟಾಗಿ ಸೇರುವ ಸಮಯ. ದೇವಾಲಯಗಳಿಂದ ಬೀದಿಗಳವರೆಗೆ, ರೋಮಾಂಚಕ ವರ್ಣಗಳು ಮತ್ತು ಸಂತೋಷದಾಯಕ ಕೂಟಗಳು ಹಬ್ಬದ ಆರಂಭವನ್ನು ಸೂಚಿಸುತ್ತವೆ.
होली के रंग, लखनऊ के संग pic.twitter.com/NrnGSaPIQL
— Brajesh Pathak (@brajeshpathakup) March 14, 2025