
ಲಾಹೋರ್: ಪಾಕಿಸ್ತಾನ ಇಂಟರ್ನ್ಯಾಷನಲ್ ಏರ್ಲೈನ್ಸ್(ಪಿಐಎ) ದೇಶೀಯ ವಿಮಾನವು ಲಾಹೋರ್ ವಿಮಾನ ನಿಲ್ದಾಣದಲ್ಲಿ ಇಳಿಯಿತು, ಅದರ ಒಂದು ಚಕ್ರ ಕಾಣೆಯಾಗಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಆದಾಗ್ಯೂ, ಗುರುವಾರ ಬೆಳಿಗ್ಗೆ ನಡೆದ ಘಟನೆಯಿಂದಾಗಿ ಯಾವುದೇ ಅಹಿತಕರ ಅಪಘಾತ ಸಂಭವಿಸಿಲ್ಲ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಕರಾಚಿಯಿಂದ ಲಾಹೋರ್‌ಗೆ ಹೊರಟಿದ್ದ ಪಿಐಎ ವಿಮಾನ ಪಿಕೆ -306 ರ ಹಿಂದಿನ ಚಕ್ರಗಳಲ್ಲಿ ಒಂದು ಲಾಹೋರ್ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಕಾಣೆಯಾಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ಘಟನೆಯ ಬಗ್ಗೆ ತನಿಖೆ ಆರಂಭಿಸಲಾಗಿದೆ. ವಿಮಾನವು “ಕಾಣೆಯಾದ ಚಕ್ರ” ದೊಂದಿಗೆ ಕರಾಚಿಯಿಂದ ಹೊರಟಿದೆಯೇ ಅಥವಾ ಟೇಕ್-ಆಫ್ ಸಮಯದಲ್ಲಿ ಬೇರ್ಪಟ್ಟು ಬಿದ್ದಿದೆಯೇ ಎಂದು ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಕರಾಚಿ ವಿಮಾನ ನಿಲ್ದಾಣದಲ್ಲಿ ಚಕ್ರದ ಕೆಲವು ತುಣುಕುಗಳು ಕಂಡುಬಂದಿವೆ. ವಿಮಾನ ಟೇಕ್ ಆಫ್ ಆಗುವಾಗ ಹಿಂದಿನ ಚಕ್ರಗಳಲ್ಲಿ ಒಂದು ಶಿಥಿಲ ಸ್ಥಿತಿಯಲ್ಲಿತ್ತು ಎಂದು ತೋರುತ್ತದೆ.
ಪಿಐಎ ವಕ್ತಾರರು, ಪಿಕೆ -306 ವಿಮಾನ ವೇಳಾಪಟ್ಟಿಯ ಪ್ರಕಾರ ಯಾವುದೇ ಅಡೆತಡೆಯಿಲ್ಲದೆ ಇಳಿಯಿತು. ವಿಮಾನದ ಕ್ಯಾಪ್ಟನ್ ನಡೆಸಿದ ವಾಕ್-ಅರೌಂಡ್ ತಪಾಸಣೆಯ ಸಮಯದಲ್ಲಿ, ಮುಖ್ಯ ಲ್ಯಾಂಡಿಂಗ್ ಗೇರ್(ಹಿಂಭಾಗ) ದಲ್ಲಿರುವ ಆರು ಚಕ್ರಗಳ ಜೋಡಣೆಗಳಲ್ಲಿ ಒಂದು ಕಾಣೆಯಾಗಿದೆ ಎಂದು ತಿಳಿದುಬಂದಿದೆ. ಚಕ್ರವನ್ನು ಕದ್ದಿದ್ದಾರೆಯೇ ಎಂದು ತನಿಖಾ ತಂಡವು ತನಿಖೆ ಮಾಡುತ್ತದೆ ಎಂದು ಹೇಳಿದ್ದಾರೆ.