
ವಿಜಯನಗರ: ಹೊರ ರಾಜ್ಯಗಳಲ್ಲಿ ಹಕ್ಕಿಜ್ವರ ಉಲ್ಬಣಗೊಳ್ಳುತ್ತಿರುವ ಬೆನ್ನಲ್ಲೇ ರಾಜ್ಯದಲ್ಲಿಯೂ ಇಂತಹ ಘಟನೆಗಲು ಮುಂದುವರೆದಿದೆ. ವಿಜಯನಗರ ಜಿಲ್ಲೆಯಲ್ಲಿ ಇದ್ದಕ್ಕಿದಂತೆ 3000 ಕೋಳಿಗಳು ಸಾವನ್ನಪ್ಪಿವೆ.
ಇಲ್ಲಿನ ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಬಳಿಯ ಖಂಡಿಕೇರಿ ತಾಂಡಾ ನಿವಾಸಿ ಪರಮೇಶ್ವರ್ ನಾಯ್ಕ್ ಎಂಬುವವರಿಗೆ ಸೇರಿದ ಕೋಳಿ ಫಾರಂ ನಲ್ಲಿ ಮೂರು ಸಾವಿರಕ್ಕೂ ಹೆಚ್ಚು ಕೋಳಿಗಳು ಸಾವನ್ನಪ್ಪಿವೆ.
ಘಟನಾ ಸ್ಥಳಕ್ಕೆ ಪಶು ವೈದ್ಯರು ಭೇಟಿ ನೀಡಿ ಮಾದರಿ ಸಂಗ್ರಹಿಸಿದ್ದಾರೆ. ಹಕ್ಕಿಜ್ವರದ ಲಕ್ಷಣ ಕಂಡುಬಂದಿಲ್ಲ. ವಿಷ ಆಹಾರ ಸೇವಿಸಿರುವ ಶಂಕೆ ವ್ಯಕ್ತವಾಗಿದೆ.
ಯುವಕ ಪರಮೇಶ್ವರ್ ನಾಯ್ಕ್ ಮೂರು ತಿಂಗಳ ಹಿಂದಷ್ಟೇ ಕೋಳಿ ಫಾರಂ ಆರಂಭಿಸಿದ್ದರು. ಇದೀಗ 3000 ಕೋಳಿಗಳು ಮೃತಪಟ್ಟಿದ್ದು, ಕಂಗಾಲಾಗಿದ್ದಾರೆ.