ಫಿಲಿಪೈನ್ಸ್‌ನ ಮನಿಲಾದ ಮೆಟ್ರೋ ರೈಲು ನಿಲ್ದಾಣದಲ್ಲಿ ಎಸ್ಕಲೇಟರ್ ತಾಂತ್ರಿಕ ದೋಷದಿಂದ ಉಲ್ಟಾ ತಿರುಗಿದ ಪರಿಣಾಮ 10 ಪ್ರಯಾಣಿಕರು ಗಾಯಗೊಂಡಿದ್ದಾರೆ. ಮಾರ್ಚ್ 8ರಂದು ಈ ಘಟನೆ ನಡೆದಿದ್ದು, ಇದರ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮನಿಲಾದ ಮೆಟ್ರೋ ರೈಲು ಸಾರಿಗೆ (ಎಂಆರ್‌ಟಿ-3) ಯ ಟಾಫ್ಟ್ ಅವೆ ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿದೆ. ಎಸ್ಕಲೇಟರ್‌ನಲ್ಲಿ ಪ್ರಯಾಣಿಕರು ಮೇಲಕ್ಕೆ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಎಸ್ಕಲೇಟರ್ ನಿಂತು, ನಂತರ ಉಲ್ಟಾ ದಿಕ್ಕಿನಲ್ಲಿ ಚಲಿಸಲು ಆರಂಭಿಸಿದೆ. ಇದರಿಂದ ಪ್ರಯಾಣಿಕರು ದಿಢೀರ್ ಆಗಿ ಕೆಳಗೆ ಬಿದ್ದಿದ್ದಾರೆ. ಕೆಲವರು ಪರಸ್ಪರ ಡಿಕ್ಕಿ ಹೊಡೆದುಕೊಂಡಿದ್ದಾರೆ. ಈ ಘಟನೆಯಲ್ಲಿ 10 ಜನರಿಗೆ ಗಂಭೀರ ಗಾಯಗಳಾಗಿವೆ.
ಎಸ್ಕಲೇಟರ್‌ನ ಮೋಟಾರ್ ಚಾಲಿತ ಮೆಟ್ಟಿಲುಗಳ ಪ್ರಾಥಮಿಕ ಡ್ರೈವ್ ಚೈನ್ ಹಾಳಾಗಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ರೈಲು ಆಡಳಿತ ಮಂಡಳಿ ತಿಳಿಸಿದೆ. ಗಾಯಗೊಂಡ ಪ್ರಯಾಣಿಕರ ವೈದ್ಯಕೀಯ ವೆಚ್ಚವನ್ನು ಭರಿಸುವುದಾಗಿ ರೈಲು ಆಡಳಿತ ಮಂಡಳಿ ಭರವಸೆ ನೀಡಿದೆ.
ಎಸ್ಕಲೇಟರ್‌ಗಳ ನಿರ್ವಹಣೆಯಲ್ಲಿನ ಲೋಪಗಳ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ರೈಲು ಆಡಳಿತ ಮಂಡಳಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.
On March 8, 10 people were injured when an escalator malfunctioned at a train station in the Philippines.
CCTV footage from the Taft Avenue station shows packed escalator riders ascending before suddenly plummeting back down. pic.twitter.com/vyeZYOLBYy
— T_CAS videos (@tecas2000) March 12, 2025