ಬಜಾಜ್ ಕಂಪನಿ ಹೊಸ ಎಲೆಕ್ಟ್ರಿಕ್ ಆಟೋವನ್ನ ಭಾರತದಲ್ಲಿ ಬಿಡುಗಡೆ ಮಾಡಿದೆ. ಇದಕ್ಕೆ ಬಜಾಜ್ ಗೋ ಗೋ ಇವಿ ಅಂತ ಹೆಸರಿಟ್ಟಿದ್ದಾರೆ. ಈ ಆಟೋ ಮೂರು ವೇರಿಯಂಟ್‌ಗಳಲ್ಲಿ ಲಭ್ಯವಿದೆ. ಬೇಸ್ ಮಾದರಿಯ ಬೆಲೆ 3.26 ಲಕ್ಷ ರೂಪಾಯಿಯಿಂದ ಪ್ರಾರಂಭವಾಗುತ್ತದೆ. ಟಾಪ್ ಮಾದರಿಯ ಬೆಲೆ 3.83 ಲಕ್ಷ ರೂಪಾಯಿ.
ಈ ಆಟೋವನ್ನ ಖರೀದಿಸಲು 24,999 ರೂಪಾಯಿ ಡೌನ್ ಪೇಮೆಂಟ್ ಕಟ್ಟಬೇಕು. ಆಂಟಿ-ಥೆಫ್ಟ್ ಅಲರ್ಟ್, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ಪಾರ್ಕ್ ಅಸಿಸ್ಟ್‌ನಂತಹ ಹೆಚ್ಚುವರಿ ಫೀಚರ್‌ಗಳನ್ನ ಪಡೆಯಲು 3,200 ರೂಪಾಯಿ ಹೆಚ್ಚುವರಿ ಹಣ ಪಾವತಿಸಬೇಕು.
ಬ್ಯಾಟರಿ, ಮೈಲೇಜ್ ಮತ್ತು ಪವರ್ ಬಗ್ಗೆ ಹೇಳೋದಾದ್ರೆ, ಬೇಸ್ ಮಾಡೆಲ್ ಪಿ5009 ನಲ್ಲಿ 4.5 ಕಿಲೋವ್ಯಾಟ್ ಪಿಎಂಎಸ್ ಮೋಟಾರ್ ಮತ್ತು 36 ಎನ್ಎಂ ಟಾರ್ಕ್ ಇದೆ. ಇದು ಫುಲ್ ಚಾರ್ಜ್ ನಲ್ಲಿ 171 ಕಿ.ಮೀ ಮೈಲೇಜ್ ನೀಡುತ್ತೆ. ಟಾಪ್ ವೇರಿಯಂಟ್ 5.5 ಕಿಲೋವ್ಯಾಟ್ ಮೋಟಾರ್ ಮತ್ತು 36 ಎನ್ಎಂ ಟಾರ್ಕ್ ಹೊಂದಿದೆ. ಇದು ಫುಲ್ ಚಾರ್ಜ್ ನಲ್ಲಿ 251 ಕಿ.ಮೀ ಮೈಲೇಜ್ ನೀಡುತ್ತೆ. ಪಿ5009 4.30 ಗಂಟೆಗಳಲ್ಲಿ 0 ರಿಂದ 80 ಪ್ರತಿಶತದವರೆಗೆ ಚಾರ್ಜ್ ಆಗುತ್ತದೆ.
ಈ ಆಟೋದಲ್ಲಿ ಫ್ರಂಟ್ ಮತ್ತು ರಿಯರ್ ಡ್ರಮ್ ಬ್ರೇಕ್‌ಗಳು, ಟೆಲಿಸ್ಕೋಪಿಕ್ ಫೋರ್ಕ್ ಫ್ರಂಟ್ ಸಸ್ಪೆನ್ಷನ್ ಮತ್ತು ಸ್ವಿಂಗ್ ಆರ್ಮ್ ರಿಯರ್ ಸಸ್ಪೆನ್ಷನ್, ರಿಜನರೇಟಿವ್ ಬ್ರೇಕಿಂಗ್, ಡ್ಯುಯಲ್-ಟೋನ್ ಅಪ್ಹೋಲ್ಸ್ಟರಿ, ಡಿಜಿಟಲ್ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಯುಎಸ್‌ಬಿ ಟೈಪ್ ಎ ಸಪೋರ್ಟ್ ಸಿಸ್ಟಮ್‌ನೊಂದಿಗೆ ಮೊಬೈಲ್ ಚಾರ್ಜರ್, ಗ್ಲೋವ್ ಬಾಕ್ಸ್ ಮತ್ತು ಟೆಲಿಮ್ಯಾಟಿಕ್ಸ್ ಇಂಟಿಗ್ರೇಷನ್‌ನಂತಹ ಹಲವು ಫೀಚರ್ಸ್‌ಗಳಿವೆ.