
ತುಮಕೂರು: ತುಮಕೂರಿನಲ್ಲಿ ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ಸೈಕೋನನ್ನು ಎನ್ಇಪಿಎಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಖಾಸಗಿ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿ ಶರತ್ ಬಂಧಿತ ಆರೋಪಿ. ತುಮಕೂರು ನಗರದ ಅಶೋಕನಗರ, ಎಸ್.ಎಸ್. ಪುರಂ, ಎಸ್ಐಟಿ ಬ್ಯಾಕ್ ಗೇಟ್ ಸೇರಿದಂತೆ ಹಲವು ಕಡೆಗಳಲ್ಲಿ ಶರತ್ ಮಹಿಳೆಯರ ಒಳ ಉಡುಪುಗಳನ್ನು ಕದಿಯುತ್ತಿದ್ದ.
ಅತಿಯಾಗಿ ನೀಲಿ ಚಿತ್ರಗಳನ್ನು ನೋಡುತ್ತಿದ್ದ ಶರತ್ ಅವುಗಳನ್ನು ನೋಡಿ ಮಹಿಳೆಯರ ಒಳುಡುಪು ಕಳವು ಮಾಡುತ್ತಿದ್ದ. ಇಂಜಿನಿಯರಿಂಗ್ ವಿದ್ಯಾರ್ಥಿ ಶರತ್ ಚಿಕ್ಕನಾಯಕನಹಳ್ಳಿ ಮೂಲದವನಾಗಿದ್ದಾನೆ ಎನ್ನಲಾಗಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ.