ಬೆಂಗಳೂರು : ಕೆಲವರ ತುಷ್ಟೀಕರಣ, ಬಹುತೇಕರ ತುಚ್ಛೀಕರಣ ಎಂದು ರಾಜ್ಯ ಸರ್ಕಾರದ ಬಜೆಟ್ ಬಗ್ಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಕೆಲವರ ತುಷ್ಟೀಕರಣ! •ಬಹುತೇಕರ ತುಚ್ಛೀಕರಣ!! ಇದು ರಾಜ್ಯ ಕಾಂಗ್ರೆಸ್ ಸರಕಾರದ 2025-26ನೇ ಸಾಲಿನ ಆಯವ್ಯಯದ ಹೂರಣ ಎಂದಿದ್ದಾರೆ.
ಬಿಜೆಪಿ ವಾಗ್ಧಾಳಿ
ಭಂಡ ಹಾಗೂ ಭ್ರಷ್ಟ ಸಿಎಂ ಸಿದ್ದರಾಮಯ್ಯ ಮಂಡಿಸಿದ ಸಂವಿಧಾನ ವಿರೋಧಿ ಬಜೆಟ್ ನ ವೈಶಿಷ್ಟ್ಯಗಳು.
ಬಜೆಟ್ನಲ್ಲಿಯೂ ಸಹ ಮುಂದುವರೆದ ಒಲೈಕೆ ರಾಜಕಾರಣ. ಕರ್ನಾಟಕದ ಇತಿಹಾಸದಲ್ಲಿಯೇ ಅತಿ ಹೆಚ್ಚು ಸಾಲ ಮಾಡಿರುವ ಆರ್ಥಿಕ ವರ್ಷ ಎಂಬ ಕುಖ್ಯಾತಿ. ಸರ್ಕಾರ ಮಾಡಿರುವ ಸಾಲ ಉತ್ಪಾದಕ ವಲಯಕ್ಕೆ ಪೂರಕವಾಗಿರದೇ, ಅನುತ್ಪಾದಕ ವಲಯಕ್ಕೆ ಮೀಸಲು ರಾಜ್ಯದ ಆದಾಯವನ್ನು ಹೆಚ್ಚಿಸಲು ಯಾವುದೇ ಉಪಕ್ರಮಗಳನ್ನು ಘೋಷಿಸದೇ, ಕೇವಲ ಸಾಲದ ಹೊರೆ ಹೆಚ್ಚಿಸಲಾಗಿದೆ ಎಂದು ಕಿಡಿಕಾರಿದೆ.
•ಕೆಲವರ ತುಷ್ಟೀಕರಣ!
•ಬಹುತೇಕರ ತುಚ್ಛೀಕರಣ!!
ಇದು ರಾಜ್ಯ @INCKarnataka ಸರಕಾರದ 2025-26ನೇ ಸಾಲಿನ ಆಯವ್ಯಯದ ಹೂರಣ!!!#BudgetOfBetrayal #AppeasementOverDevelopment #MajorityIgnored#DiscriminationBudget #FalsePromises#karnatakabudget2025— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) March 7, 2025