
ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ‘ಡೆವಿಲ್’ ಚಿತ್ರದ ಶೂಟಿಂಗ್ ಶುಕ್ರವಾರದಿಂದ ಶುರುವಾಗಲಿದೆ.
‘ಮಿಲನ’ ಖ್ಯಾತಿಯ ಪ್ರಕಾಶ್ ವೀರ್ ನಿರ್ಧೇಶನ ‘ಡೆವಿಲ್’ ಚಿತ್ರದ ಶೂಟಿಂಗ್ ಇಂದಿನಿಂದ ಆರಂಭವಾಗಲಿದ್ದು, ಚಿತ್ರೀಕರಣದಲ್ಲಿ ದರ್ಶನ್ ಈಗಲೇ ಪಾಲ್ಗೊಳ್ಳುತ್ತಿಲ್ಲ. ವೈದ್ಯರ ಸಲಹೆ ಪಡೆದು ಅವರು ಮುಂದಿನ ವಾರ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ.
ಈಗಾಗಲೇ ‘ಡೆವಿಲ್’ ಚಿತ್ರಕ್ಕಾಗಿ ದರ್ಶನ್ ವರ್ಕೌಟ್ ಶುರು ಮಾಡಿದ್ದಾರೆ. ಆದರೆ, ಅನಾರೋಗ್ಯದ ಕಾರಣ ಪ್ರಯಾಸಕರವಾದ ವ್ಯಾಯಾಮಗಳನ್ನು ಅವರಿಗೆ ಮಾಡಲಾಗುವುದಿಲ್ಲ. ವೈದ್ಯರ ಸಲಹೆ ಪಡೆದು ಮುನ್ನೆಚ್ಚರಿಕೆ ತೆಗೆದುಕೊಂಡು ಚಿತ್ರೀಕರಣಕ್ಕೆ ದರ್ಶನ್ ಸಿದ್ಧವಾಗುತ್ತಿದ್ದಾರೆ. ಸದ್ಯ ಟಾಕಿ ಭಾಗದ ಚಿತ್ರೀಕರಣ ಮುಗಿಸಿಕೊಂಡು ಮುಂದಿನ ಶೆಡ್ಯೂಲ್ ಗಳಲ್ಲಿ ದೈಹಿಕ ಕಸರತ್ತು ಬಯಸುವ ಭಾಗಗಳ ಶೂಟಿಂಗ್ ನಡೆಸಲಾಗುವುದು ಎಂದು ಹೇಳಲಾಗಿದೆ.