HomeKarnatakaಪೊಲೀಸ್ ಫೈರಿಂಗ್ ತರಬೇತಿ ವೇಳೆ ಗುರಿ ತಪ್ಪಿ ಕುರಿಗಾಹಿ ಮಹಿಳೆಗೆ ಗುಂಡೇಟು

ಪೊಲೀಸ್ ಫೈರಿಂಗ್ ತರಬೇತಿ ವೇಳೆ ಗುರಿ ತಪ್ಪಿ ಕುರಿಗಾಹಿ ಮಹಿಳೆಗೆ ಗುಂಡೇಟು

ಕೊಪ್ಪಳ: ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಫೈರಿಂಗ್ ತರಬೇತಿ ವೇಳೆ ಕಾನ್ಸ್ಟೇಬಲ್ ಒಬ್ಬರು ಹಾರಿಸಿದ್ದ ಗುಂಡು ಸಮೀಪದಲ್ಲಿ ಇದ್ದ ಕುರಿಗಾಹಿ ಮಹಿಳೆಯ ಕೈಗೆ ಬಿದ್ದಿದೆ. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಜಂಬಲಗುಡ್ಡ ಗ್ರಾಮದ ಸಮೀಪದಲ್ಲಿರುವ ಕುಮ್ಮಟದುರ್ಗದಲ್ಲಿ ಪೊಲೀಸ್ ತರಬೇತಿ ಶಾಲೆ ಇದೆ. ಮಂಗಳವಾರ ಡಿಎಆರ್ ಪೊಲೀಸ್ ಕಾನ್ಸ್ಟೇಬಲ್ ಗಳಿಗೆ ಫೈರಿಂಗ್ ತರಬೇತಿ ನಡೆಯುತ್ತಿತ್ತು. ರೇಣುಕಮ್ಮ ಎಂಬ ಮಹಿಳೆ ಕುರಿ ಕಾಯುತ್ತಾ ಅಲ್ಲಿಗೆ ಬಂದಿದ್ದಾರೆ. ಈ ವೇಳೆ ಕಾನ್ಸ್ಟೇಬಲ್ ಒಬ್ಬರು ಹಾರಿಸಿದ ಗುಂಡು ಗುರಿ ತಪ್ಪಿ ರೇಣುಕಮ್ಮನವರ ತೋಳಿಗೆ ಬಿದ್ದಿದೆ. ಕೂಡಲೇ ಅವರನ್ನು ಮುನಿರಾಬಾದ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular