
ಫೆಬ್ರವರಿ 21 ರ ಘಟನೆಯ ಸಿಸಿಟಿವಿ ದೃಶ್ಯವು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ಬಾಲಕ ಇಸ್ರೇಲಿ ಗುಂಡಿನ ದಾಳಿಯಿಂದ ಕೊಲ್ಲಲ್ಪಟ್ಟ ಕ್ಷಣಗಳನ್ನು ತೋರಿಸುತ್ತದೆ. ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಇಸ್ರೇಲಿ ಮಿಲಿಟರಿ ಹಲವಾರು ವಾರಗಳಿಂದ ವೆಸ್ಟ್ ಬ್ಯಾಂಕ್ ನಾದ್ಯಂತ ರಾತ್ರೋರಾತ್ರಿ ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸುತ್ತಿದೆ. ಶುಕ್ರವಾರ ರಾತ್ರಿ, ಯಹೂದಿ ವಸಾಹತುಗಾರರು ಅಲ್ಲಿ ಪ್ರಾರ್ಥನೆ ಮಾಡಲು ಬರುತ್ತಾರೆ. ಅವರ ಭೇಟಿಗೆ ಮೊದಲು, ಇಸ್ರೇಲಿ ಪಡೆಗಳು ಸುತ್ತಮುತ್ತಲಿನ ಪ್ಯಾಲೆಸ್ತೀನ್ ಜಿಲ್ಲೆಗಳಲ್ಲಿ ಗಸ್ತುಗಳನ್ನು ನಡೆಸುತ್ತದೆ. ಶುಕ್ರವಾರ ರಾತ್ರಿ ಸುಮಾರು 6.30 ಕ್ಕೆ, ಬಾಲಕ ತಾತನ ಫ್ಲಾಟ್‌ಗೆ ಹೋಗಿ ತನ್ನ ಚಿಕ್ಕಪ್ಪನ ಮನೆಗೆ ಮರಳುತ್ತಿದ್ದಾಗ ಮುಖ್ಯ ರಸ್ತೆಯಿಂದ ಗುಂಡಿನ ಸದ್ದು ಕೇಳಿಸಿದೆ.
ಗುಂಡಿನ ಸದ್ದು ಕೇಳಿದ ಕೂಡಲೇ, ಬಾಲಕ ಮತ್ತು ಅವನ ಸೋದರಸಂಬಂಧಿಗಳು ಮನೆಯಿಂದ ಹೊರಬಂದು, ಕ್ಷಣಗಳ ಹಿಂದೆ ಗುಂಡು ಹಾರಿಸಿದ ನೆರೆಹೊರೆಯವರಿಗೆ ಸಹಾಯ ಮಾಡಿದ್ದಾರೆ. ನಂತರ ಅಲ್ಲೇ ಗದ್ದಲವಾಗಿದ್ದು ಮತ್ತೊಂದು ಗುಂಡು ಹಾರಿಸಲಾಗಿದೆ. ಬಾಲಕ ಮತ್ತು ಅವನ ಸೋದರಸಂಬಂಧಿಗಳು ಆಶ್ರಯಕ್ಕಾಗಿ ಓಡಿದ್ದಾರೆ.
ಬಾಲಕ ಮನೆಯ ಗೇಟ್ ಒಳಗೆ ಓಡಿದ್ದು ಮತ್ತು ಕ್ಯಾಮೆರಾಗಳ ದೃಷ್ಟಿಯಿಂದ ಹೊರಗೆ ಹೋಗುತ್ತಾನೆ, ಆಗ ಅಲ್ಲೇ ಗಲ್ಲಿಯಿಂದ ಮತ್ತೊಂದು ಗುಂಡು ಹಾರಿಸಲಾಗುತ್ತದೆ. ಈ ಗುಂಡು ಬಾಲಕನಿಗೆ ತಗುಲಿದೆ ಎಂದು ನಂಬಲಾಗಿದೆ.
ವಿಶೇಷವಾಗಿ 2023 ರ ಅಕ್ಟೋಬರ್ 7 ರಂದು ಹಮಾಸ್ ದಾಳಿಯ ನಂತರ ಮತ್ತು ಗಾಜಾ ಯುದ್ಧದ ಆರಂಭದ ನಂತರ ಇಸ್ರೇಲ್ ರಕ್ಷಣಾ ಪಡೆಗಳು ಆಕ್ರಮಿತ ಪ್ರದೇಶದಲ್ಲಿ ಕಾರ್ಯಾಚರಣೆಗಳನ್ನು ಹೆಚ್ಚಿಸಿದಾಗಿನಿಂದ, ವೆಸ್ಟ್ ಬ್ಯಾಂಕ್ ನಲ್ಲಿ ಮಕ್ಕಳ ಹತ್ಯೆ ಸಾಮಾನ್ಯವಾಗಿದೆ. ಈ ವರ್ಷ ಇದುವರೆಗೆ, “ಸೈನಿಕರಿಗೆ ಬೆದರಿಕೆ ಒಡ್ಡದಿದ್ದರೂ” ಸುಮಾರು 16 ಪ್ಯಾಲೆಸ್ತೀನ್ ಮಕ್ಕಳು ಕೊಲ್ಲಲ್ಪಟ್ಟಿದ್ದಾರೆ.
“ಪ್ಯಾಲೆಸ್ತೀನಿಯನ್ನರ ವಿರುದ್ಧದ ಉಲ್ಲಂಘನೆಗಳಿಗೆ ಇಸ್ರೇಲಿ ಸೈನಿಕರನ್ನು ಹೊಣೆಗಾರರನ್ನಾಗಿ ಮಾಡುವಲ್ಲಿನ ವೈಫಲ್ಯವು ಅವರ ಕ್ರಮಗಳನ್ನು ಮುಂದುವರಿಸಲು ಅವರಿಗೆ ಹಸಿರು ನಿಶಾನೆ ನೀಡಿದೆ” ಎಂದು ಮಾನವ ಹಕ್ಕುಗಳ ಸಂಸ್ಥೆಯೊಂದು ಹೇಳಿದೆ.
CCTV footage captures the moment Israeli occupation forces shoot and kill 11-year-old Palestinian child Ayman Al-Haimouni in Al-Ksara area in Hebron yesterday. pic.twitter.com/DI5f2vVXXc
— Quds News Network (@QudsNen) February 22, 2025