
ಗಂಗಾವತಿ: ಚಲಿಸುತ್ತಿದ್ದ ಕೆ.ಎಸ್.ಆರ‍್.ಟಿ.ಸಿ ಬಸ್ ಟೈರ್ ಸ್ಫೋಟಗೊಂಡ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ದಾಸನಾಳದ ಹೊರವಲಯದಲ್ಲಿ ನಡೆದಿದೆ.
ಚಲಿಸುತ್ತಿದ್ದ ಬಸ್ ನ ಮುಂದಿನ ಟೈರ್ ಏಕಾಏಕ್ ಬ್ಲಾಸ್ಟ್ ಆಗಿದೆ. ನಿಯಂತ್ರಣ ಕಳೆದುಕೊಂಡ ಬಸ್ ಅಡ್ಡಾದಿಡ್ಡಿಯಾಗಿ ಚಲಿಸಲಾರಂಭಿಸಿದೆ. ಆದಾಗ್ಯೂ ಹೆದರದ ಚಾಲಕ ತಕ್ಷಣ ಬಸ್ ನಿಯಂತ್ರಣಕ್ಕೆ ತಂದು ನಿಲ್ಲಿಸಿದ್ದಾರೆ. ಚಾಲಕ ಮಂಜುನಾಥ್ ಅವರ ಸಮಯಪ್ರಜ್ಞೆಯಿಂದ ಬಸ್ ನಲ್ಲಿದ್ದ 20 ಪ್ರಯಾಣಿಕರು ಪಾರಾಗಿದ್ದಾರೆ.