HomeKarnatakaBIG NEWS: ನಮ್ಮಣ್ಣ ಸಿಎಂ ಆಗಬೇಕು ಎಂಬ ಆಸೆ ನನಗೂ ಇದೆ: ಅಣ್ಣ ಮುಖ್ಯಮಂತ್ರಿಯಾಗುವ ಕನಸು...

BIG NEWS: ನಮ್ಮಣ್ಣ ಸಿಎಂ ಆಗಬೇಕು ಎಂಬ ಆಸೆ ನನಗೂ ಇದೆ: ಅಣ್ಣ ಮುಖ್ಯಮಂತ್ರಿಯಾಗುವ ಕನಸು ಬಿಚ್ಚಿಟ್ಟ ಡಿ.ಕೆ.ಸುರೇಶ್

ಬೆಂಗಳೂರು: ನಮ್ಮಣ್ಣ ಸಿಎಂ ಆಗಬೇಕು ಎಂಬ ಆಸೆ, ಕನಸು ನನಗೂ ಇದೆ. ಆದರೆ ಕಾಲಬರಬೇಕು ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಸುರೇಶ್, ಅಣ್ಣ ಸಿಎಂ ಆಗಬೇಕು ಎಂಬ ಕನಸು ನನಗೂ ಇದೆ. ಆದರೆ ಸದ್ಯಕ್ಕೆ ಮುಖ್ಯಮಂತ್ರಿ ಸೀಟ್ ಖಾಲಿ ಇಲ್ಲ. ಸದ್ಯ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಇದ್ದಾರೆ. ಸೀಟ್ ಖಾಲಿ ಇದ್ದಾಗ ಮಾತ್ರ ಪ್ರಯತ್ನ ಮಾಡ್ಬೇಕು. ಬಲವಂತವಾಗಿ ಎಳೆದು ಸೀಟ್ ಮೇಲೆ ಕೂರಿಸಲು ಆಗಲ್ಲ ಎಂದರು.

ನನಗೂ ಒಂದು ಆಸೆ ಇದೆ. ಅಣ್ಣ ಸಿಎಂ ಆಗಬೇಕು. ಆದರೆ ಎಲ್ಲದಕ್ಕೂ ಕಾಲಬರಬೇಕು, ಬರುತ್ತೆ. ನಮಗೆ ನಂಬಿಕೆ ಇದೆ. ನಂಬಿಕೆ ಮೇಲೆ ಜೀವನವಿದೆ ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular