
ನವದೆಹಲಿ: ಚಿನ್ನದ ದರ ಮತ್ತೆ 500 ರೂಪಾಯಿ ಇಳಿಕೆಯಾಗಿದೆ. ಚಿನ್ನಾಭರಣ ವ್ಯಾಪಾರಿಗಳಿಂದ ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ಮತ್ತು ಹೂಡಿಕೆದಾರರು ಮಾರಾಟಕ್ಕೆ ಮುಂದಾದ ಪರಿಣಾಮ ಚಿನ್ನದ ದರ ಶುಕ್ರವಾರ ದೆಹಲಿಯಲ್ಲಿ 500 ರೂಪಾಯಿ ಕಡಿಮೆಯಾಗಿದೆ.
ಶೇಕಡ 99.9ರಷ್ಟು ಪರಿಶುದ್ಧತೆಯ ಚಿನ್ನ ಗುರುವಾರ 10 ಗ್ರಾಂ ಗೆ 82,200 ರೂಪಾಯಿ ಇತ್ತು. ಶುಕ್ರವಾರ 87,700ರೂ.ಗೆ ಇಳಿಕೆಯಾಗಿದೆ. ಕಳೆದ ಎರಡು ವಾರಗಳಲ್ಲಿ ಇದು ಅತಿ ಕಡಿಮೆ ಬೆಲೆಯಾಗಿದೆ ಎಂದು ಹೇಳಲಾಗಿದೆ.
ಈ ವರ್ಷದ ಜನವರಿ 1ರಂದು ಚಿನ್ನದ ದರ 79,390 ರೂಪಾಯಿ ಇತ್ತು. ಈಗ 87,700 ರೂ.ಗೆ ತಲುಪಿದ್ದು, ಪ್ರಸಕ್ತ ವರ್ಷದಲ್ಲಿ ಇದುವರೆಗೆ ಚಿನ್ನದ ದರ 8310 ರೂಪಾಯಿ(ಶೇಕಡ 10.5 ರಷ್ಟು) ಏರಿಕೆಯಾಗಿದೆ.
ಶೇಕಡ 99.5 ರಷ್ಟು ಪರಿಶುದ್ಧತೆಯ ಚಿನ್ನ ಗುರುವಾರ 87,800 ರೂ., ಶುಕ್ರವಾರ 87,300 ರೂಪಾಯಿಗೆ ಇಳಿದಿದೆ. ಬೆಳ್ಳಿ ದರ ಕೂಡ ಸತತ ಮೂರನೇ ದಿನ ಕಡಿಮೆಯಾಗಿದೆ. ಶುಕ್ರವಾರ ಒಂದು ಕೆಜಿ ಬೆಳ್ಳಿ ದರ 2100 ರೂ. ಇಳಿಕೆಯಾಗಿದೆ. ಗುರುವಾರ 98,500 ರೂಪಾಯಿ ಇದ್ದ ಬೆಳ್ಳಿ ದರ ಶುಕ್ರವಾರ 96,400 ರೂಪಾಯಿ ಆಗಿದೆ.