ಛತ್ತೀಸ್‌ಗಢದ ದುರ್ಗ್‌ನಲ್ಲಿ ನಡೆದ ನಂಬಲಸಾಧ್ಯವಾದ ಪಲಾಯನ ಯತ್ನವೊಂದು ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರನ್ನು ಬೆರಗುಗೊಳಿಸಿದೆ. ಮೂರು ಅಂತಸ್ತಿನ ಕಟ್ಟಡದಿಂದ ಜಿಗಿದು ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸುವ ವ್ಯಕ್ತಿಯೊಬ್ಬನ ಸಾಹಸವನ್ನು ಈ ವಿಡಿಯೋ ಸೆರೆಹಿಡಿದಿದೆ. ಈ ಪ್ರಯತ್ನದಲ್ಲಿ ಆತ ವಿದ್ಯುತ್ ತಂತಿಗೆ ತಗುಲಿ ಪ್ರಜ್ಞಾಹೀನನಾಗಿ ಛಾವಣಿಯ ಮೇಲೆ ಬೀಳುತ್ತಾನೆ. ಆದರೆ ಎಲ್ಲರನ್ನೂ ಬೆಚ್ಚಿಬೀಳಿಸುವಂತೆ, ಆತ ಮತ್ತೆ ಎದ್ದು ಪೊಲೀಸರ ಮೇಲೆ ದಾಳಿ ಮಾಡುತ್ತಾನೆ!
ಕಥಾನಾಯಕನ ಸಾಹಸದ ಆರಂಭದಲ್ಲಿ, ಆತ ಕಟ್ಟಡದ ಟೆರೇಸ್ ಮೇಲೆ ನಿಂತಿರುತ್ತಾನೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ದಾರಿ ಹುಡುಕುತ್ತಿರುವ ಆತ, ಉದ್ದನೆಯ ಕೋಲೊಂದನ್ನು ಹಿಡಿದು ಹತ್ತಿರದಲ್ಲಿದ್ದ ಪೋಲಿಸ್ ಅಧಿಕಾರಿಯೊಬ್ಬರ ಕಡೆಗೆ ಆಕ್ರಮಣಕಾರಿಯಾಗಿ ಬೀಸುತ್ತಾನೆ. ನಂತರ ಕೆಳಗಡೆ ರಸ್ತೆಯಲ್ಲಿ ನಿಂತಿರುವ ಇತರ ಪೊಲೀಸರ ಕಡೆಗೆ ಕೋಲನ್ನು ಎಸೆಯುತ್ತಾನೆ.
ಕ್ಷಣಾರ್ಧದಲ್ಲಿಯೇ, ಆತ ಟೆರೇಸ್‌ನಿಂದ ಕೆಳಗೆ ಜಿಗಿಯುತ್ತಾನೆ! ಕೆಳಗೆ ಬೀಳುವಾಗ, ವಿದ್ಯುತ್ ತಂತಿಗಳಿಗೆ ಸಿಲುಕಿಕೊಳ್ಳುತ್ತಾನೆ. ಕಿಡಿಗಳು ಹಾರುವದರೊಂದಿಗೆ ಆತ ಕೆಲಕಾಲ ಪ್ರಜ್ಞಾಹೀನನಾಗುತ್ತಾನೆ. ನಂತರ ನೆಲ ಮಹಡಿಗೆ ಹೊಂದಿಕೊಂಡಿರುವ ಹುಲ್ಲಿನ ಆಸ್ಬೆಸ್ಟಾಸ್ ಛಾವಣಿಯ ಮೇಲೆ ಬೀಳುತ್ತಾನೆ.
ಬಿದ್ದ ಎತ್ತರ ಮತ್ತು ವಿದ್ಯುತ್ ಸ್ಪರ್ಶವನ್ನು ನೋಡಿದರೆ, ಆತ ಸತ್ತಿರಬಹುದು ಅಥವಾ ಗಂಭೀರವಾಗಿ ಗಾಯಗೊಂಡಿರಬಹುದು ಎಂದು ಹೆಚ್ಚಿನವರು ಭಾವಿಸಿದ್ದರು. ಆದರೆ ಎಲ್ಲರನ್ನೂ ದಂಗುಬಡಿಸುವಂತೆ, ಆತ ಬೇಗನೆ ಮೇಲೆ ಏಳುತ್ತಾನೆ! ಇಷ್ಟೇ ಅಲ್ಲದೆ, ಎರಡು ಇಟ್ಟಿಗೆಗಳನ್ನು ತೆಗೆದುಕೊಂಡು ತನ್ನನ್ನು ಹಿಡಿಯಲು ಬಂದ ಪೊಲೀಸರ ಮೇಲೆ ದಾಳಿ ಮಾಡಲು ಯತ್ನಿಸುತ್ತಾನೆ.
ಈ ವಿಡಿಯೋ ರೆಡ್ಡಿಟ್ ಸೇರಿದಂತೆ ಅನೇಕ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದೆ. ಇಲ್ಲಿ 2,400 ಕ್ಕೂ ಹೆಚ್ಚು ಅಪ್‌ವೋಟ್‌ಗಳು ಮತ್ತು 600 ಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಈ ವಿಡಿಯೋ ಪಡೆದುಕೊಂಡಿದೆ. ನೆಟ್ಟಿಗರು ಈ ಅಚ್ಚರಿಯ ಘಟನೆಯ ಬಗ್ಗೆ ತರಹೇವಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಕೆಲವರು ಆತನ ಪುನರುತ್ಥಾನವನ್ನು ನೋಡಿ ಹಾಸ್ಯ ಮಾಡಿದ್ದಾರೆ, ಇನ್ನು ಕೆಲವರು ಆತನ ಅದೃಷ್ಟವನ್ನು ಹೊಗಳಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
“Superhuman – The Real Wolverine”
In Durg, Chhattisgarh : Man jumps from 3rd floor, gets Electrocuted and entangled in electric wires, passes out and then falls and then miraculously gets up to throw bricks at police.
Hollywood – 0
Desi-Wood – 1 pic.twitter.com/FzIJ3Fba5J— Megh Updates 🚨™ (@MeghUpdates) February 23, 2025