
ವಾಷಿಂಗ್ಟನ್: ಆಪ್ತ ಸ್ನೇಹಿತ ಮತ್ತು ಉದ್ಯಮಿ ಎಲಾನ್ ಮಸ್ಕ್ ಮಕ್ಕಳ ಕಿತಾಪತಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಧ್ಯಕ್ಷರ ಕಚೇರಿ ಟೇಬಲ್ ಬದಲಾವಣೆ ಮಾಡಿದ್ದಾರೆ.
ಅಮೆರಿಕ ಅಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಅವರು ಅಧ್ಯಕ್ಷರ ಕಚೇರಿ ಕೊಠಡಿಯಲ್ಲಿದ್ದ 145 ವರ್ಷಗಳ ಹಳೆಯ ಐತಿಹಾಸಿಕ ಟೇಬಲ್ ಬದಲಿಸಿದ್ದಾರೆ. ಶ್ವೇತಭವನ ಕಚೇರಿಯಲ್ಲಿದ್ದ ರೆಸಲ್ಯೂಟ್ ಡೆಸ್ಕ್ ಅನ್ನು ಟ್ರಂಪ್ ಬದಲಾಯಿಸಿದ್ದಾರೆ.
ಅವರ ಸ್ನೇಹಿತ ಎಲಾನ್ ಮಸ್ಕ್ ಮಕ್ಕಳ ಹುಡುಗಾಟಿಕೆಯಿಂದಾಗಿ ಡೊನಾಲ್ಡ್ ಟ್ರಂಪ್ ಚಾರಿತ್ರಿಕ ಟೇಬಲ್ ಬದಲಾಯಿಸಿದ್ದಾರೆ ಎಂದು ಹೇಳಲಾಗಿದೆ. ಇತ್ತೀಚೆಗೆ ಅಧ್ಯಕ್ಷರ ಕಚೇರಿಗೆ ಮಸ್ಕ್ ತಮ್ಮ ಮಕ್ಕಳನ್ನು ಕರೆದುಕೊಂಡು ಬಂದಿದ್ದರು. ಅಧ್ಯಕ್ಷರ ಪಕ್ಕದಲ್ಲಿ ಕುಳಿತುಕೊಂಡಿದ್ದ ಎಲಾನ್ ಮಸ್ಕ್ ಅವರ ಮಗ ಮೂಗಿಗೆ ಬೆರಳು ಹಾಕಿ ಟೇಬಲ್ ಗೆ ಒರಸಿದ್ದ. ಇದನ್ನು ಕಂಡು ಕಸಿವಿಸಿಕೊಂಡ ಡೊನಾಲ್ಡ್ ಟ್ರಂಪ್ ಹಳೆಯ ಟೇಬಲ್ ಬದಲಾವಣೆ ಮಾಡಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಟ್ರಂಪ್, ಅಧ್ಯಕ್ಷರ ಆಯ್ಕೆಯಂತೆ ಟೇಬಲ್ ನೀಡಲಾಗುವುದು. ಜಾರ್ಜ್ ಬುಷ್ ಬಳಕೆ ಮಾಡುತ್ತಿದ್ದ ಟೇಬಲ್ ಅನ್ನು ನಾನು ಆಯ್ಕೆಕೊಂಡಿದ್ದೇನೆ. ಹಳೆಯ ಟೇಬಲ್ ಕೊಂಚ ನವೀಕರಣ ಮಾಡಲಾಗಿದೆ. ತಾತ್ಕಾಲಿಕವಾಗಿ ಕಚೇರಿಯಲ್ಲಿ ಕೆಲವೊಂದಿಷ್ಟು ಬದಲಾವಣೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.