
ನವದೆಹಲಿ: ದೇವಾಲಯದಲ್ಲಿ ಬೆಂಕಿ ಅವಘಡ ಸಂಭವಿಸಿ ಅರ್ಚಕರೊಬ್ಬರು ಸಜೀವದಹನವಾಗಿರುವ ಘಟನೆ ದೆಹಲಿಯ ರೋಹಿಣಿ ಪ್ರದೇಶದಲ್ಲಿ ನಡೆದಿದೆ.
ಇಲ್ಲಿನ್ ಅಪ್ರಸಿದ್ಧ ಸೂರ್ಯ ದೇವಾಲಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆ ವೇಳೆ ದೇವಾಲಯದ ಅರ್ಚಕರು ದೇವಸ್ಥಾನದೊಳಗೆ ಇದ್ದರು. ಹೊರ ಬರಲಾಗದೇ ಅರ್ಚಕರು ಬೆಂಕಿಗಾಹುತಿಯಾಗಿದ್ದಾರೆ.
ಪಂಡಿತ್ ಬನ್ವಾರಿ ಲಾಲ್ ಶರ್ಮಾ (65) ಮೃತ ಅರ್ಚಕರು. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಆದರೆ ಅರ್ಚಕರು ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದ್ದಾರು. ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.