ನಾಸಿಕ್‌ನ ನ್ಯಾಯಾಲಯದ ಹೊರಗೆ ಅತ್ತೆ-ಸೊಸೆ ಮತ್ತು ಅವರ ಸಂಬಂಧಿಕರ ನಡುವೆ ಭೀಕರ ಕಾಳಗ ನಡೆದಿದೆ. ಗುರುವಾರ (20ನೇ) ಮಧ್ಯಾಹ್ನ ನ್ಯಾಯಾಲಯದ ವಿಚಾರಣೆಗೆ ಬಂದಿದ್ದ ಅತ್ತೆ ಮತ್ತು ಸೊಸೆಯಂದಿರ ನಡುವೆ ಈ ಘಟನೆ ನಡೆದಿದೆ. ನ್ಯಾಯಾಲಯದ ಆವರಣದಲ್ಲಿ ನಡೆದ ಈ ಘಟನೆಯಿಂದ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ.
ಘಟನೆಯ ಆರಂಭದಲ್ಲಿ ಸ್ಥಳದಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಗಳು ಮತ್ತು ವಕೀಲರು ಮೂಕ ಪ್ರೇಕ್ಷಕರಾಗಿ ನಿಂತಿದ್ದರು. ನಂತರ ಸಾರ್ವಜನಿಕರು ಮತ್ತು ಪೊಲೀಸರು ಮಧ್ಯಪ್ರವೇಶಿಸಿ ಜಗಳವನ್ನು ತಡೆದರು.
ಅತ್ತೆ ಯಮುನಾ ಯಶವಂತ್ ನಿಕಮ್ (58, ಪಿಂಪಲ್ಪಟ್ಟಿ, ಜೈಲ್ ರಸ್ತೆ) ಮತ್ತು ಸೊಸೆಯ ಸಹೋದರ ದೀಪಕ್ ಹಿರಾಮನ್ ಸಾಳ್ವೆ (37, ಧುಲ್‌ಗಾಂವ್, ಮಹಿರವಾಣಿ) ನಡುವೆ ಮಾತಿನ ಚಕಮಕಿ ನಡೆದು ನಂತರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಎರಡೂ ಗುಂಪುಗಳ ಪುರುಷರು ಮತ್ತು ಮಹಿಳೆಯರು ಹೊಡೆದಾಡಿಕೊಂಡರು. ಘಟನೆಯಲ್ಲಿ ನಿಲ್ಲಿಸಿದ್ದ ವಾಹನಗಳು ಉರುಳಿವೆ.
ಸ್ಥಳೀಯರು ಸಮಾಧಾನಪಡಿಸಲು ಪ್ರಯತ್ನಿಸಿದರೂ ಎರಡೂ ಗುಂಪುಗಳು ಜಗಳ ಮುಂದುವರೆಸಿದವು. ನಂತರ ಸರ್ಕಾರ್ವಾಡ ಪೊಲೀಸರು ಮಧ್ಯಪ್ರವೇಶಿಸಿ ಎರಡೂ ಗುಂಪುಗಳನ್ನು ಪೊಲೀಸ್ ಠಾಣೆಗೆ ಕರೆದೊಯ್ದರು. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಸಂಬಂಧಪಟ್ಟವರಿಗೆ ನೋಟಿಸ್ ನೀಡಲಾಗಿದೆ.
#WATCH | Nashik: Mother-in-Law and Daughter-in-Law Clash Outside Court, Chaos Ensues#NashikNews #Maharashtra #viralvideo pic.twitter.com/MyXdsvTHRw
— Free Press Journal (@fpjindia) February 21, 2025