BIG NEWS: ಅಂಗನವಾಡಿಗೆ ಕನ್ನಡ ಶಿಕ್ಷಕಿ ನೇಮಕ: ಕೇರಳ ಹೈಕೋರ್ಟ್ ಆದೇಶ

ಕಾಸರಗೋಡು: ಕೋರಿಕಂಡ ಅಂಗನವಾಡಿಗೆ ಕನ್ನಡ ಶಿಕ್ಷಕಿ ನೇಮಕ ಮಾಡುವಂತೆ ಕೇರಳ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಕಾಸರಗೋಡು ಜಿಲ್ಲೆಯ ಆಡೂರು ಬಳಿಯ ಕೋರಿಕಂಡ ಅಂಗನವಾಡಿ ಕೇಂದ್ರಕ್ಕೆ ಕನ್ನಡ ಗೊತ್ತಿರುವ ಶಿಕ್ಷಕಿಯನ್ನು ನೇಮಕ ಮಾಡುವಂತೆ ಹೈಕೋರ್ಟ್ ತೀರ್ಪು ನೀಡಿದೆ.

ಕನ್ನಡ ಮಾಧ್ಯಮದ ಈ ಅಂಗನವಾಡಿಗೆ ಕೇರಳ ಸರ್ಕಾರ ಮಲಯಾಳಂ ಶಿಕ್ಷಕಿಯನ್ನು ನೇಮಕ ಮಾಡಿದೆ. ಇದರಿಂದ ಈ ಅಂಗನವಾಡಿ ಪೋಷಕರು, ಅಂಗನವಾಡಿ ಮೇಲುಸ್ತುವಾರಿ ಸಮಿತಿಯವರು (ಎ ಎಲ್ ಎಂ ಎಸ್) ಹೈಕೋರ್ಟ್ ಗೆ ಮೂರು ಪ್ರತ್ಯೇಕ ರಿಟ್ ಅರ್ಜಿ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ಮಲಯಾಳಂ ಶಿಕ್ಷಕಿ ನೇಮಕ ಸರಿಯಲ್ಲ. ತಕ್ಷಣ ಕನ್ನಡ ಶಿಕ್ಷಕಿಯನ್ನು ನೇಮಕ ಮಾಡುವಂತೆ ಆದೇಶ ನೀಡಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read