
ನವದೆಹಲಿ: ಚಿನ್ನ ಮತ್ತು ಬೆಳ್ಳಿ ದರ ಇಳಿಕೆಯಾಗಿದ್ದು, ಚಿನ್ನಾಭರಣ ಖರೀದಿಸುವವರಿಗೆ ಕೊಂಚ ಸಿಹಿ ಸುದ್ದಿ ಸಿಕ್ಕಂತಾಗಿದೆ.
ದೆಹಲಿಯ ಚಿನಿವಾರ ಪೇಟೆಯಲ್ಲಿ ಸೋಮವಾರ ನಡೆದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ದರ ಇಳಿಕೆ ಕಂಡಿದೆ. ಶೇಕಡ 99.9ರಷ್ಟು ಪರಿಶುದ್ಧತೆಯ 10 ಗ್ರಾಂ ಚಿನ್ನದ ದರ 1,200 ರೂ. ಇಳಿಕೆಯಾಗಿದ್ದು, 88,200 ರೂ.ಗೆ ಮಾರಾಟವಾಗಿದೆ. ಶೇಕಡ 99.5 ರಷ್ಟು ಪರಿಶುದ್ಧತೆಯ ಆಭರಣ ಚಿನ್ನದ ದರ ಕೂಡ 1,200 ರೂ. ಕಡಿಮೆಯಾಗಿದ್ದು 87,800 ರೂ.ಗೆ ಮಾರಾಟವಾಗಿದೆ.
ಅದೇ ರೀತಿ, ಬೆಳ್ಳಿ ದರ ಕೆಜಿಗೆ 1800 ರೂಪಾಯಿ ಕಡಿಮೆಯಾಗಿದ್ದು, 98,200 ರೂ.ಗೆ ಮಾರಾಟವಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಚಿನ್ನಾಭರಣ ತಯಾರಕರು ಮತ್ತು ಚಿಲ್ಲರೆ ಮಾರಾಟಗಾರರಿಂದ ಬೇಡಿಕೆ ಕಡಿಮೆಯಾಗಿದೆ. ಹೀಗಾಗಿ ಚಿನ್ನದ ದರ ಕುಸಿತವಾಗಿದೆ ಎಂದು ಹೇಳಲಾಗಿದೆ.