alex Certify ಕುಂಭಮೇಳದಲ್ಲಿ ವೈರಲ್ ಆದ ಮೋನಾಲಿಸಾ ಈಗ ʼಸೆಲೆಬ್ರಿಟಿʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಂಭಮೇಳದಲ್ಲಿ ವೈರಲ್ ಆದ ಮೋನಾಲಿಸಾ ಈಗ ʼಸೆಲೆಬ್ರಿಟಿʼ

ಮೋನಾಲಿಸಾ, ಮಹಾಕುಂಭ ಮೇಳದಲ್ಲಿ ರುದ್ರಾಕ್ಷಿ ಮಾರುವ ಮೂಲಕ ವೈರಲ್ ಆದ ಹುಡುಗಿ. ಈಗ ಅವರ ಅದೃಷ್ಟ ಖುಲಾಯಿಸಿದೆ. ಕಪ್ಪನೆಯ ಮೈಬಣ್ಣ, ಆಕರ್ಷಕ ಕಣ್ಣುಗಳು ಮತ್ತು ಮುಗ್ಧತೆಯಿಂದ ಎಲ್ಲರ ಮನಗೆದ್ದ ಮೋನಾಲಿಸಾ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ.

ಅಭಿನೇತ್ರಿ ಆಗುವ ಮೊದಲೇ, ಮೋನಾಲಿಸಾ ಅವರಿಗೆ ದೊಡ್ಡ ದೊಡ್ಡ ಬ್ರ್ಯಾಂಡ್‌ಗಳ ಪ್ರಮೋಷನ್ ಆಫರ್‌ಗಳು ಬರಲಾರಂಭಿಸಿವೆ. ಈ ಸಂಬಂಧ ಅವರು ನಿರ್ದೇಶಕ ಸನೋಜ್ ಮಿಶ್ರಾ ಅವರೊಂದಿಗೆ ಜ್ಯುವೆಲ್ಲರಿ ಬ್ರ್ಯಾಂಡ್‌ನ ಪ್ರಮೋಷನ್ ಇವೆಂಟ್‌ಗಾಗಿ ಕೇರಳಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಮೋನಾಲಿಸಾ ತುಂಬಾ ಸುಂದರವಾಗಿ ಕಾಣುತ್ತಿದ್ದರು, ಅವರನ್ನು ನೋಡಲು ಅವರ ಅಭಿಮಾನಿಗಳು ಮುಗಿಬಿದ್ದರು.

ಕೇರಳದ ಪ್ರಸಿದ್ಧ ಜ್ಯುವೆಲ್ಲರಿ ಬ್ರ್ಯಾಂಡ್ ಒಂದು ತನ್ನ ಪ್ರಮೋಷನ್‌ಗಾಗಿ ಸುಂದರ ಕಣ್ಣುಗಳ ಮೋನಾಲಿಸಾ ಅವರನ್ನು ರಾಯಭಾರಿಯನ್ನಾಗಿ ಆಯ್ಕೆ ಮಾಡಿದೆ. ಇದಕ್ಕಾಗಿ ಮೋನಾಲಿಸಾ 15 ಲಕ್ಷ ರೂಪಾಯಿಗಳ ದೊಡ್ಡ ಮೊತ್ತವನ್ನು ಪಡೆದಿದ್ದಾರೆ.

ಮೋನಾಲಿಸಾ ‘ದಿ ಮಣಿಪುರ್ ಡೈರಿ’ ಸಿನಿಮಾದಲ್ಲಿ ನಟಿಸಲು ನಿರ್ದೇಶಕ ಸನೋಜ್ ಮಿಶ್ರಾ ಅವರನ್ನು ಭೇಟಿಯಾಗಿದ್ದಾರೆ. ವರದಿಗಳ ಪ್ರಕಾರ, ಮೋನಾಲಿಸಾ ಅವರಿಗೆ ಈ ಚಿತ್ರಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ನೀಡಲಾಗುವುದು. ಮೋನಾಲಿಸಾ ಅವರ ಸೌಂದರ್ಯ ಮತ್ತು ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು ನಿರ್ದೇಶಕ ಸನೋಜ್ ಮಿಶ್ರಾ ಅವರು ಮೋನಾಲಿಸಾ ಅವರೊಂದಿಗೆ ಸಿನಿಮಾ ಮಾಡಲು ನಿರ್ಧರಿಸಿದ್ದಾರೆ.

ಈ ಚಿತ್ರಕ್ಕಾಗಿ ಮೋನಾಲಿಸಾ 21 ಲಕ್ಷ ರೂಪಾಯಿಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಅಷ್ಟೇ ಅಲ್ಲ, ನೀಲಿ ಕಣ್ಣಿನ ಈ ವೈರಲ್ ಹುಡುಗಿಗೆ ಈ ಚಿತ್ರಕ್ಕಾಗಿ 1 ಲಕ್ಷ ರೂಪಾಯಿ ಮುಂಗಡವಾಗಿ ಸಿಕ್ಕಿದೆ, ಇದರಿಂದ ಅವರು ನಟಿಯಾಗುವ ಮೊದಲೇ ಲಕ್ಷಾಧಿಪತಿಯಾಗಿದ್ದಾರೆ.

ಮೋನಾಲಿಸಾ ಅವರ ಜನಪ್ರಿಯತೆ ಎಷ್ಟರ ಮಟ್ಟಿಗೆ ಇದೆ ಎಂದರೆ ಅವರ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಅವರ ಅಭಿಮಾನಿಗಳು ಅವರ ಪ್ರತಿಯೊಂದು ವಿಷಯವನ್ನು ತಿಳಿದುಕೊಳ್ಳಲು ಕಾತುರರಾಗಿರುತ್ತಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...