
ಕಲಬುರಗಿ: ಪ್ರಕರಣವೊಂದರಲ್ಲಿ ಜೈಲು ಸೇರಿ ಜೈವಾವಧಿ ಶಿಕ್ಷೆಗೆ ಗುರಿಯಾಗಿದ್ದ 7 ಕೈದಿಗಳನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
14 ವರ್ಷಗಳ ಜೀವಾವಧಿ ಶಿಕ್ಷೆ ಅನುಭವಿಸಿದ್ದ ಒಟ್ಟು 7 ಅಪರಾಧಿಗಳನ್ನು ಕಲಬುರಗಿ ಸೆಂಟ್ರಲ್ ಜೈಲಿನಿಂದ ಇಂದು ಬಿಡುಗಡೆ ಮಾಡಲಾಗಿದೆ. ಶಿವಪ್ಪ, ಶಿವರಾಜ್, ಅಂಜಿಲಪ್ಪ, ಆನಂದ್ @ ದಿಲೀಪ್, ಸಂಗಪ್ಪ, ಆನಂದ್, ಮಾಣಿಕ್ಯ ಸೇರಿದಂತೆ 7 ಕೈದಿಗಳನ್ನು ಜೈಲಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.