
ನವದೆಹಲಿ: ದೆಹಲಿ ರೈಲು ನಿಲ್ದಾಣದ 13, 14, 15ನೇ ಪ್ಲಾಟ್ಫಾರ್ಮ್ ಗಳಲ್ಲಿ ಕಾಲ್ತುಳಿತ ಉಂಟಾಗಿದ್ದು, ಹಲವರು ಗಾಯಗೊಂಡಿದ್ದಾರೆ.
ಪ್ರಯಾಗ್ ರಾಜ್ ಗೆ ತೆರಳಲು ಬಂದಿದ್ದ ಪ್ರಯಾಣಿಕರಿಂದ ನೂಕುನುಗ್ಗಲು ಉಂಟಾಗಿದೆ. ಏಕಾಏಕಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದಿದ್ದರಿಂದ ಘಟನೆ ನಡೆದಿದೆ. ರೈಲು ನಿಲ್ದಾಣದಲ್ಲಿ ಜನಸಂಖ್ಯೆ ಹೆಚ್ಚಾಗಿ ಅವಘಡ ಉಂಟಾಗಿದೆ.
ನಾಲ್ವರು ಮಹಿಳೆಯರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. 15 ಜನ ಗಾಯಗೊಂಡಿದ್ದು, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಯಾಗ್ ರಾಜ್ ಗೆ ಹೋಗಲು ವಿವಿಧ ರಾಜ್ಯಗಳಿಂದ ದೆಹಲಿಗೆ ಜನ ಆಗಮಿಸಿದ್ದು, ರೈಲ್ವೆ ಇಲಾಖೆ ದೆಹಲಿಯಿಂದ ಪ್ರಯಾಗ್ ರಾಜ್ ಗೆ ಎರಡು ವಿಶೇಷ ರೈಲುಗಳ ವ್ಯವಸ್ಥೆ ಮಾಡಿತ್ತು. ಜನ ಜನರಲ್ ಬೋಗಿಯನ್ನು ಹತ್ತುವ ವೇಳೆಯಲ್ಲಿ ಭಾರಿ ನೂಕುನುಗ್ಗಲು ಉಂಟಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ರೈಲ್ವೆ ಮತ್ತು ದೆಹಲಿ ಪೊಲೀಸರು ಹರಸಾಹಸ ನಡೆಸಿದ್ದಾರೆ. ರೈಲ್ವೆ ನಿಲ್ದಾಣಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಸ್ವಸ್ಥರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ಷಣಾ ಸಿಬ್ಬಂದಿ ಕೂಡ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
ಮಹಾಕುಂಭಕ್ಕಾಗಿ ನವದೆಹಲಿ ರೈಲು ನಿಲ್ದಾಣಕ್ಕೆ ಭಾರಿ ಜನಸಮೂಹ ತಲುಪುತ್ತಿದ್ದಂತೆ ಈ ಬೆಳವಣಿಗೆ ಸಂಭವಿಸಿದೆ. ಈ ಪ್ರಯಾಣಿಕರಲ್ಲಿ ಹೆಚ್ಚಿನವರು ದೃಢೀಕೃತ ರೈಲು ಟಿಕೆಟ್‌ಗಳನ್ನು ಹೊಂದಿರದವರಾಗಿದ್ದರು. ರೈಲ್ವೆ ಪ್ರಕಾರ, ಪರಿಸ್ಥಿತಿ ಪ್ರಸ್ತುತ ನಿಯಂತ್ರಣದಲ್ಲಿದೆ.
ಪರಿಸ್ಥಿತಿಯನ್ನು ನಿಯಂತ್ರಿಸಲು ಭಾರತೀಯ ರೈಲ್ವೆ ಅಧಿಕಾರಿಗಳು ಮತ್ತು ದೆಹಲಿ ಪೊಲೀಸರು ಸ್ಥಳದಲ್ಲಿದ್ದಾರೆ. ಮತ್ತು ಈ ಜನರು ಟಿಕೆಟ್ ಇಲ್ಲದೆ ಹೇಗೆ ಬಂದರು ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ.
ರೈಲ್ವೆ ನಿಲ್ದಾಣದಲ್ಲಿ ಯಾವುದೇ ಕಾಲ್ತುಳಿತ ಸಂಭವಿಸಿಲ್ಲ. ಆದರೆ ಜನಸಂದಣಿ ತುಂಬಾ ಹೆಚ್ಚಾಗಿದ್ದು, ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವ ಜನರಿಗೆ ಉಸಿರುಗಟ್ಟಿಸುವಂತಹ ಪರಿಸ್ಥಿತಿ ಉಂಟಾಗಿದೆ ಎಂದೂ ಹೇಳಲಾಗಿದೆ.
ಯಾವುದೇ ಕಾಲ್ತುಳಿತವಿಲ್ಲ. ಇದು ಕೇವಲ ವದಂತಿಯಾಗಿದೆ. ಉತ್ತರ ರೈಲ್ವೆ ಎರಡು ಯೋಜಿತ ವಿಶೇಷ ರೈಲುಗಳನ್ನು(ಪ್ರಯಾಗ್‌ರಾಜ್‌ಗಾಗಿ) ಓಡಿಸುತ್ತಿತ್ತು ಎಂದು ಉತ್ತರ ರೈಲ್ವೆ ಸಿಪಿಆರ್‌ಒ ತಿಳಿಸಿದ್ದಾರೆ.
#WATCH | A call was received that 15 people had been injured in a stampede-like situation at New Delhi Railway Station. 4 fire tenders at the spot: Delhi Fire Service
Visuals from New Delhi Railway Station https://t.co/jcVm5LhTMO pic.twitter.com/KVoqJ86CRT
— ANI (@ANI) February 15, 2025