HomeKarnatakaBIG NEWS: ಕಾರು-ಬೈಕ್ ಭೀಕರ ಅಪಘಾತ: 12 ವರ್ಷದ ಮಗ ಸ್ಥಳದಲ್ಲೇ ಸಾವು, ತಂದೆಯ ಸ್ಥಿತಿ...

BIG NEWS: ಕಾರು-ಬೈಕ್ ಭೀಕರ ಅಪಘಾತ: 12 ವರ್ಷದ ಮಗ ಸ್ಥಳದಲ್ಲೇ ಸಾವು, ತಂದೆಯ ಸ್ಥಿತಿ ಗಂಭೀರ

ರಾಮನಗರ: ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 12 ವರ್ಷದ ಬಾಲಕ ಸಾವನ್ನಪ್ಪಿದ್ದು, ಆತನ ತಂದೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಮನಗ್ರಾ ಜಿಲ್ಲೆಯ ಎಸ್ ಪಾಳ್ಯ ಬಳಿಯ ಫ್ಯಾಕ್ಟರಿ ಬಳಿ ನಡೆದಿದೆ.

ಚಿರಂತ್ ಗೌಡ (12) ಮೃತ ಬಾಲಕ. ಚಿರಂತ್ ತಂದೆ ಸತೀಶ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಜ್ಜಿಯ ಮನೆಗೆ ಬಿಡಲೆಂದು ಚಿರಂತ್ ನನ್ನು ಬೈಕ್ ನಲ್ಲಿ ಕರೆದೊಯ್ಯುತ್ತಿದ್ದ ವೇಳೆ ಬೈಕ್ ಗೆ ಕಾರು ಡಿಕ್ಕಿ ಹೊಡೆದಿದೆ. ಸ್ಥಳದಲ್ಲೇ ಬಾಲಕ ಸಾವನ್ನಪ್ಪಿದ್ದಾನೆ.

ಗಾಯಾಳು ಸತೀಶ್ ಅವರನ್ನು ದಯಾನಂದ ಆಸ್ಪತ್ರೆಗೆ ದಾಖಲಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular