ಥೈರೋಕೇರ್ ಸಂಸ್ಥಾಪಕ ಡಾ. ಅರೋಕ್ಯಸ್ವಾಮಿ ವೇಲುಮಣಿ ಅವರು ಮುಂಬೈ ಭೇಟಿಯ ಸಂದರ್ಭದಲ್ಲಿ ಸಮಾಜದ ವಿಭಜನೆಯ ಕಟು ವಾಸ್ತವವನ್ನು ಎದುರಿಸಿದ್ದಾರೆ. ಈ ಕುರಿತು ಅವರು ತಮ್ಮ X ಖಾತೆಯಲ್ಲಿ (ಹಿಂದೆ ಟ್ವಿಟರ್) ಹಂಚಿಕೊಂಡಿದ್ದಾರೆ.
ವೇಲುಮಣಿ ಅವರು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ತಮ್ಮ ಸ್ಟಾರ್ ಹೋಟೆಲ್‌ಗೆ ಆಟೋ ರಿಕ್ಷಾದಲ್ಲಿ ಪ್ರಯಾಣಿಸುವ ಮೂಲಕ ಹೋಗಲು ಬಯಸಿದ್ದರು. ಆಟೋ ಚಾಲಕನೊಂದಿಗೆ ಮಾತುಕತೆ ನಡೆಸುವಾಗ, ಅವರ ಮಗ ಐಐಟಿ ಹೈದರಾಬಾದ್‌ನಲ್ಲಿ ಮೂರನೇ ವರ್ಷದ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಮಗನ ಶುಲ್ಕವನ್ನು ಭರಿಸಲು, ಚಾಲಕ ದಿನಕ್ಕೆ 12 ರಿಂದ 14 ಗಂಟೆಗಳ ಕಾಲ ದುಡಿಯುತ್ತಿದ್ದರು.
ಆದರೆ, ಹೋಟೆಲ್ ತಲುಪಿದಾಗ ಭದ್ರತಾ ಸಿಬ್ಬಂದಿ ಆಟೋ ರಿಕ್ಷಾವನ್ನು ಒಳಗೆ ಬಿಟ್ಟಿಲ್ಲ. “ಹೋಟೆಲ್‌ನ ನಿಯಮಗಳು” ಎಂದು ಸಿಬ್ಬಂದಿ ಕಟುವಾಗಿ ಉತ್ತರಿಸಿದರು ಎಂದು ವೇಲುಮಣಿ ಹೇಳಿದ್ದಾರೆ. ಇದರಿಂದ ಬೇಸರಗೊಂಡ ವೇಲುಮಣಿ ಅವರು ಆಟೋ ಇಳಿದು ಒಳಗೆ ನಡೆದುಕೊಂಡು ಹೋಗಬೇಕಾಯಿತು.
ಈ ಘಟನೆಯನ್ನು ಖಂಡಿಸಿರುವ ವೇಲುಮಣಿ, “ಬಿ.ಕೆ.ಸಿ.ಯ ಸ್ಟಾರ್ ಹೋಟೆಲ್ ರಿಕ್ಷಾವನ್ನು ಒಳಗೆ ಬಿಡಲಿಲ್ಲ. ಭದ್ರತಾ ಸಿಬ್ಬಂದಿ ‘ಹೋಟೆಲ್‌ನ ನಿಯಮಗಳು’ ಎಂದು ಕಟುವಾಗಿ ಹೇಳಿದರು. ನನ್ನನ್ನು ಇಳಿದು ಒಳಗೆ ನಡೆಯುವಂತೆ ಮಾಡಿದರು. ಇದು ಯಾವ ರೀತಿಯ ನಿಯಮ ?” ಎಂದು ಪ್ರಶ್ನಿಸಿದ್ದಾರೆ.
Came for an event in Mumbai.
T2 terminal. Tried a rickshaw this time. Just for fun. Cool conversation.
Me: how many years driving.
He: > 30 yrs.
Me : Family?
He: wife and Son.
Me: What is son doing ?
He: IIT Hyderabad, 3rd year.
Me: how many hrs you drive daily?
He: 12 to… pic.twitter.com/qaQHArD8v8— Dr. A. Velumani.PhD. (@velumania) February 7, 2025