![](https://kannadadunia.com/wp-content/uploads/2022/11/Dashboard_952_heartattack_9_20.jpg)
ಬೀದರ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ತೆರಳಿದ್ದ ಮತ್ತೋರ್ವ ವ್ಯಕ್ತಿ ಊರಿಗೆ ವಾಪಾಸ್ ಆಗುತ್ತಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೀದರ್ ಜಿಲ್ಲೆಯ ಔರಾಡ್ ತಾಲೂಕಿನ ಠಾಣಾಕುಶನೂರು ಗ್ರಾಮದ ಕಂಟೆಪ್ಪಾ ಜಿರ್ಗೆ (65) ಮೃತ ವ್ಯಕ್ತಿ. ಕೆಲ ದಿನಗಳ ಹಿಂದೆ ಕುಟುಂಬ ಸಮೇತರಾಗಿ ಕಂಟೆಪ್ಪಾ ಜಿರ್ಗಿ ಮಹಾಕುಂಭ ಮೇಳಕ್ಕೆ ತೆರಳಿದ್ದರು. ಪ್ರಯಾಗ್ ರಾಜ್ ನಿಂದ ಕಾಶಿಗೆ ತೆರಳಿದ್ದರು ಎಂದು ತಿಳಿದುಬಂದಿದೆ. ಕಾಶಿಯಿಂದ ಬೀದರ್ ಗೆ ಹಿಂದಿರುಗುತ್ತಿದ್ದಾಗ ಹೃದಯಾಘಾತ ಸಂಭವಿಸಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.