ಲಕ್ನೋದಲ್ಲಿ ನಡೆದ ಮದುವೆಯೊಂದರಲ್ಲಿ ಅನಿರೀಕ್ಷಿತ ಅತಿಥಿಯ ಆಗಮನದಿಂದ ಇಡೀ ಸಮಾರಂಭವೇ ಭಯಭೀತಗೊಂಡಿತು. ಪಾರಾದಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭದಲ್ಲಿ ಚಿರತೆಯೊಂದು ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದು, ಈ ಘಟನೆಯಿಂದಾಗಿ ಜನ ಊಟೋಪಚಾರಗಳನ್ನು ಬಿಟ್ಟು ಮೇಜುಗಳ ಕೆಳಗೆ ಮತ್ತು ಪೆಂಡಾಲ್ ಹಿಂದೆ ಅಡಗಿಕೊಳ್ಳುವಂತಾಯಿತು.
ಈ ಸಮಾರಂಭದ ವಿಡಿಯೋವನ್ನು ಸೆರೆಹಿಡಿಯುತ್ತಿದ್ದ ಛಾಯಾಗ್ರಾಹಕ ಭಯದಿಂದ ಎರಡನೇ ಮಹಡಿಯಿಂದ ಕೆಳಗೆ ಜಿಗಿದು ಆಸ್ಪತ್ರೆಗೆ ದಾಖಲಾಗುವಂತಾಗಿದೆ. ರಕ್ಷಣಾ ಕಾರ್ಯಕ್ಕೆ ಬಂದ ಪೊಲೀಸ್ ತಂಡದ ಒಬ್ಬರಿಗೆ ಚಿರತೆ ದಾಳಿ ಮಾಡಿದ್ದು, ಆತ ಗಾಯಗೊಂಡಿದ್ದಾರೆ. ಚಿರತೆ ಮದುವೆಯ ಸ್ಥಳದಲ್ಲಿ ಅಡಗಿಕೊಂಡಿದ್ದರಿಂದ ವಿವಾಹದ ಆಚರಣೆಗಳು ಸ್ಥಗಿತಗೊಂಡಿದ್ದು, ತಡರಾತ್ರಿ 3.18ಕ್ಕೆ ಚಿರತೆಯನ್ನು ಹಿಡಿಯಲಾಯಿತು ಮತ್ತು ನಂತರ ಮದುವೆಯ ಕಾರ್ಯಕ್ರಮಗಳು ಮುಂದುವರೆದಿದೆ.
ಈ ಘಟನೆ ಬುಧವಾರ ರಾತ್ರಿ ನಡೆದಿದೆ. ಬುದ್ಧೇಶ್ವರದ ಬಳಿ ಇರುವ ಆರ್ಡಿಎಸ್‌ಒ ನಿವಾಸಿ ಜ್ಯೋತಿ ಅಗರ್ವಾಲ್ ಮತ್ತು ಸಿಂಗರ್ ನಗರದ ಅಕ್ಷಯ್ ಶ್ರೀವಾಸ್ತವ ಅವರ ವಿವಾಹ ಸಮಾರಂಭ ನಡೆಯುತ್ತಿತ್ತು. ರಾತ್ರಿ 9:30 ಕ್ಕೆ ಕೆಲವರು ಊಟ ಮಾಡುತ್ತಿದ್ದರೆ, ಇನ್ನೂ ಕೆಲವರು ವಿವಾಹದ ಸಂಪ್ರದಾಯಗಳಲ್ಲಿ ತೊಡಗಿದ್ದರು.
ಹೀಗಿರುವಾಗ, ಇದ್ದಕ್ಕಿದ್ದಂತೆ ಚಿರತೆ ಮದುವೆಯ ಸ್ಥಳಕ್ಕೆ ನುಗ್ಗಿದೆ. ಇದರಿಂದ ಜನರು ಭಯಭೀತರಾಗಿದ್ದು, ಕೆಲವರು ಓಡಿಹೋಗಿ ಕೊಠಡಿಗಳಲ್ಲಿ ಅಡಗಿಕೊಂಡರೆ, ಇನ್ನೂ ಕೆಲವರು ಪೆಂಡಾಲ್, ಮೇಜು ಮತ್ತು ಗೋಡೆಯ ಆಶ್ರಯದಲ್ಲಿ ಅಡಗಿಕೊಂಡರು. ಚಿರತೆ ಮೇಲಿನ ಮಹಡಿಗೆ ತಲುಪಿದ್ದು, ಅಲ್ಲಿ ವಿಡಿಯೋ ಮಾಡುತ್ತಿದ್ದ ಶರದ್ ಗೌತಮ್ ಭಯಭೀತರಾಗಿ ಕೆಳಗೆ ಜಿಗಿದ ಪರಿಣಾಮ ಅವರಿಗೆ ಹಲವು ಕಡೆ ಗಾಯಗಳಾಗಿವೆ. ಅವರನ್ನು ಲಾಲ್‌ಬಾಗ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ.
लखनऊ में पारा क्षेत्र के बुद्धेश्वर के एमएम लॉन में चल रहे विवाह समारोह में घुसा तेंदुआ। तीन- चार को किया घायल। लोगों में दहशत। #leopardinlucknow pic.twitter.com/haE9pSCJvl
— Dharmendra Pandey🇮🇳 (@Dharm0912) February 12, 2025