![](https://kannadadunia.com/wp-content/uploads/2025/02/maheshwar-rao.jpg)
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿಗರ ಜೀವನಾಡಿ ‘ನಮ್ಮ ಮೆಟ್ರೋ’ ಪ್ರಯಾಣ ದರ ಭಾರಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ದಿಢೀರ್ ಕುಸಿತವಾಗಿದೆ. ಪ್ರಯಾಣ ದರ ಇಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಅಲ್ಲದೇ ಮೆಟ್ರೋ ಪ್ರಯಾಣ ದರ ಅಸಹಜವಾಗಿ ಏರಿಕೆ ಮಾಡಿದ ಕಡೆಗಳಲ್ಲಿ ಇಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಸೂಚಿಸಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಬಿಎಂಆರ್ ಸಿಎಲ್ ಸ್ಪಷ್ಟನೆ ನೀಡಿದೆ.
ಮೆಟ್ರೋ ಪ್ರಯಾಣ ದರ ಇಳೆಕೆ ಮಾಡುವುದಿಲ್ಲ ಎಂದು ಬಿಎಂಆರ್ ಸಿ ಎಲ್ ಎಂಡಿ ಮಹೇಶ್ವರ್ ರಾವ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಹೇಶ್ವರ್ ರಾವ್, ಮೆಟ್ರೋ ಪ್ರಯಾಣ ದರ ಪರಿಶೀಲನೆ ನಡೆಸಿಯೇ ಏರಿಕೆ ಮಾಡಲಾಗಿದೆ. ಪ್ರಯಾಣದರ ಇಳಿಕೆ ಇಲ್ಲ ಎಂದು ತಿಳಿಸಿದರು.
ಹಲವೆಡೆ ಮೆಟ್ರೋ ಪ್ರಯಾಣ ದರ ಶೇ.100, 90ರಷ್ಟು ಜಂಪ್ ಆಗಿದೆ. ಜಂಪ್ ಆಗಿರುವ ದರವನ್ನು ಮರು ನಿಗದಿ ಬಗ್ಗೆ ಚರ್ಚೆ ನಡೆಸಲಾಗುವುದು. ಆದರೆ ಮೆಟ್ರೋ ಪ್ರಯಾಣ ದರ ಇಳಿಕೆ ಆಗಲ್ಲ ಎಂದು ಸ್ಪಷ್ಟಪಡಿಸಿದರು.