ಬೆಂಗಳೂರಿನಲ್ಲಿ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ಖ್ಯಾತಿಯ ‘ಬೆಂಗಳೂರು ಏರ್ ಶೋ’ ನಡೆಯುತ್ತಿದ್ದು, ಇಂದಿನಿಂದ ಸಾರ್ವಜನಿಕರು ಭಾಗವಹಿಸಬಹುದಾಗಿದೆ.
ಯಲಹಂಕದ ವಾಯುನೆಲೆಯಲ್ಲಿ 4 ದಿನಗಳ ಕಾಲ ವೈಮಾನಿಕ ಪ್ರದರ್ಶನ ನಡೆಯುತ್ತಿದ್ದು, ಇಂದು ಮತ್ತು ನಾಳೆ ಸಾರ್ವಜನಿಕರು ನೀಲಿ ಆಕಾಶದಲ್ಲಿ ಲೋಹದ ಹಕ್ಕಿಗಳ ಪ್ರದರ್ಶನವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಮೇಕ್ ಇನ್ ಇಂಡಿಯಾ ಅಡಿಯಲ್ಲಿ ತಯಾರಾಗಿರುವ ಯುದ್ಧ ವಿಮಾನಗಳ ಪ್ರದರ್ಶನ ಮತ್ತು ವಿದೇಶಗ ಸಾಕಷ್ಟು ಯುದ್ಧ ವಿಮಾನಗಳು ಪ್ರದರ್ಶನಗೊಳ್ಳಲಿದೆ.
ಇಂದು ಬೆಳಗ್ಗೆ 9:30 ರಿಂದ 12 ಮತ್ತು ಮಧ್ಯಾ್ಹ್ನ 2:30 ರಿಂದ ಸಂಜೆ 5 ಗಂಟೆವರೆಗೆ ಏರ್ ಶೋ ಎರಡು ಪ್ರದರ್ಶನ ಇರಲಿದೆ.
ಟಿಕೆಟ್ ದರ ಎಷ್ಟು..?
ಭಾರತೀಯರಿಗೆ 2,500 ರೂಪಾಯಿ ಇದ್ದರೆ, ವಿದೇಶಿಗರಿಗೆ ಯುಎಸ್ ಡಾಲರ್ 50 ಇರಲಿದೆ. ಎಡಿವಿಎ ಪಾಸ್: ಭಾರತೀಯರಿಗೆ 1,000 ರೂ | ವಿದೇಶಿಗರಿಗೆ ಯುಎಸ್ ಡಾಲರ್ 50 ಇರಲಿದೆ. ವ್ಯಾಪಾರ ಪಾಸ್: ಭಾರತೀಯರಿಗೆ 5,000 ಸಾವಿರ ಹಾಗೂ ವಿದೇಶಿಗರಿಗೆ ಯುಎಸ್ ಡಾಲರ್ 50 ಇರಲಿದೆ.
ಟಿಕೆಟ್ ಬುಕ್ ಮಾಡೋದು ಹೇಗೆ..?
1) ನೀವು ಏರೋ ಇಂಡಿಯಾದ ಅಧಿಕೃತ ವೆಬ್ಸೈಟ್ ataeroindia.gov.in.ಗೆ ಭೇಟಿ ನೀಡಿ *
2) ವೆಬ್ಸೈಟ್ನ ಹೋಮ್ ಪೇಜ್ನಲ್ಲಿ ಕಾಣಿಸುವ ಸಂದರ್ಶಕರ ನೋಂದಣಿ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
3) ನಿಮಗೆ ಯಾವ ಮಾದರಿಯ ಪಾಸ್ ಬೇಕು ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
4) ನಿಮ್ಮ ಹೆಸರು ಹಾಗೂ ಮೊಬೈಲ್ ಸಂಖ್ಯೆ ಮತ್ತು ಅಗತ್ಯ ವಿವರಗಳನ್ನು ನಮೂದಿಸಿ.
5) ಟಿಕೆಟ್ ಮೊತ್ತವನ್ನು ಪಾವತಿ ಮಾಡಿ ಹಾಗೂ ಸಲ್ಲಿಸು ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಇದಾದ ಮೇಲೆ ನಿಮಗೆ ಏರೋ ಇಂಡಿಯಾ 2025ರ ಪಾಸ್ ಸಿಗಲಿದೆ. ಇನ್ನು ಹೆಚ್ಚಿನ ಮಾಹಿತಿ ಅಥವಾ ವಿವರಗಳಿಗೆ ಅಧಿಕೃತ ಏರೋ ಇಂಡಿಯಾ ವೆಬ್ಸೈಟ್ಗೆ ಭೇಟಿ ನೀಡಬಹುದಾಗಿದೆ.