HomeEntertainmentBIG NEWS : ಕಣ್ಣೀರು ಹಾಕಬೇಡ, ನಾನಿದ್ದೇನೆ : ಖ್ಯಾತ ನಟ ವಿಶಾಲ್ ಗೆ ತುಳುನಾಡಿನ...

BIG NEWS : ಕಣ್ಣೀರು ಹಾಕಬೇಡ, ನಾನಿದ್ದೇನೆ : ಖ್ಯಾತ ನಟ ವಿಶಾಲ್ ಗೆ ತುಳುನಾಡಿನ ದೈವದ ಅಭಯ.!

ಮಂಗಳೂರು : ಖ್ಯಾತ ನಟ ವಿಶಾಲ್ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವುದು ನಿಮಗೆ ಗೊತ್ತಿದೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಅವರು ನಡುಗುತ್ತಾ ಮಾತನಾಡಿದ್ದರು. ಸ್ಟೇಜ್ ನಲ್ಲಿಅವರು ಕೈಗಳನ್ನು ನಡುಗಿಸುತ್ತಾ ತೊದಲು ಮಾತನಾಡಿದ್ದರು. ಇದರಿಂದ ಅವರು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದರು ಎಂಬುದು ಗೊತ್ತಾಗಿತ್ತು.

ಈ ಹಿನ್ನೆಲೆ ನಟ ವಿಶಾಲ್ ಅವರು ತುಳುನಾಡಿನ ದೈವದ ಮೊರೆ ಹೋಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಹರಿಪಾದದಲ್ಲಿನ ಜಾರಂದಾಯ ದೇವಾಲಯಕ್ಕೆ ಅವರು ಭೇಟಿ ನೀಡಿದ್ದು, ಆರೋಗ್ಯ ಸಮಸ್ಯೆಯನ್ನು ನಿವಾರಿಸುವಂತೆ ದೈವದ ಮೊರೆ ಹೋಗಿದ್ದಾರೆ.

ಕಣ್ಣೀರು ಹಾಕಬೇಡ, ನಾನಿದ್ದೇನೆ ಎಂದು ಖ್ಯಾತ ನಟ ವಿಶಾಲ್ ಗೆ ತುಳುನಾಡಿನ ದೈವದ ಅಭಯ ನೀಡಿದೆ. ದೈವಕ್ಕೆ ಮಲ್ಲಿಗೆ ಹೂವು ಅರ್ಪಿಸಿ ಆರೋಗ್ಯ ಸಮಸ್ಯೆ ನಿವಾರಿಸುವಂತೆ ಬೇಡಿಕೊಂಡಿದ್ದಾರೆ. ಕಣ್ಣೀರು ಹಾಕಬೇಡ, ನಾನಿದ್ದೇನೆ. ನಿನ್ನ ಆರೋಗ್ಯ ಸರಿಯಾಗಲಿದೆ. ಗುಣಮುಖನಾಗಿ ಬಂದು ತುಲಾಭಾರ ಸೇವೆ ಅರ್ಪಿಸು ಎಂದು ದೈವ ಅಭಯ ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular