ಆರ್. ಅನಂತ ರಾಜು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಕ್ಯಾಪಿಟಲ್ ಸಿಟಿ’ ಚಿತ್ರದ ಟ್ರೈಲರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ನೋಡುಗರ ಗಮನ ಸೆಳೆಯುವುದಲ್ಲದೆ ಭರ್ಜರಿ ವೀಕ್ಷಣೆ ಕಂಡಿದೆ. ಈ ಸಿನಿಮಾ ತನ್ನ ಟ್ರೈಲರ್ ಮೂಲಕ ಸಾಕಷ್ಟು ಕುತೂಹಲ ಮೂಡಿಸಿದ್ದು, ಇದೇ ಫೆಬ್ರವರಿ 21ಕ್ಕೆ ತೆರೆ ಮೇಲೆ ಬರಲು ಸಿದ್ಧವಾಗಿದೆ.
ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಇನಿಫಿನಿಟಿ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ವಿ. ರಾಜೀವ್ ರೆಡ್ಡಿ ಹಾಗೂ ಮಂಜುನಾಥ್ ಎಸ್ ನಿರ್ಮಾಣ ಮಾಡಿದ್ದು, ರಾಜೀವ್ ರೆಡ್ಡಿ ಸೇರಿದಂತೆ ಪ್ರೇರಣಾ, ರವಿಶಂಕರ್, ಸುಮನ್, ಶರತ್ ಲೋಹಿತಾಶ್ವ ಬಣ್ಣ ಹಚ್ಚಿದ್ದಾರೆ. ಎಸ್ಪಿ ನಾಗರಾಜು ಸಂಗೀತ ಸಂಯೋಜನೆ ನೀಡಿದ್ದಾರೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿದೆ.