![](https://kannadadunia.com/wp-content/uploads/2025/02/rahul-thonse.jpg)
ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದ ಆರೋಪಿ ರಾಹುಲ್ ತೋನ್ಸ್ ವಿರುದ್ಧ ಉದ್ಯಮಿಗೆ 25.5 ಕೋಟಿ ವಚನೆ ಆರೋಪ ಕೇಳಿಬಂದಿದ್ದು, ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕ್ಯಾಸಿನೋದಲ್ಲಿ ಹೂಡಿಕೆ ಆಮಿಷವೊಡ್ಡಿ ಉದ್ಯಮಿಯೊಬ್ಬರಿಗೆ ರಾಹುಲ್ ತೋನ್ಸೆ ಹಾಗೂ ಗ್ಯಾಂಗ್ 25.5 ಕೋಟಿ ರೂಪಾಯಿ ವಂಚನೆ ಎಸಗಿದ್ದಾರೆ. ಉದ್ಯಮಿ ವಿವೇಕ್ ಹೆಗ್ಡೆ ಎನ್ನುವವರಿಗೆ ಬರೋಬ್ಬರಿ 25.5 ಕೋಟಿ ವಂಚಿಸಿದ್ದು, ರಾಹುಲ್ ತೋನ್ಸೆ ಹಾಗೂ ಗ್ಯಾಂಗ್ ವಿರುದ್ಧ ಬೆಂಗಳೂರಿನ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಂಚನೆ ಹಿನ್ನೆಯಲ್ಲಿ ರಾಹುಲ್ ತೋನ್ಸೆ, ಆತನ ಅಪ್ಪ ರಾಮಕೃಷ್ಣ ರಾವ್, ತಾಯಿ ರಾಜೇಶ್ವರಿ ಸೇರಿದಂತೆ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪ್ರಕರಣ ಸಂಬಂಧ ಎ1 ಆರೋಪಿ ರಾಮಕೃಷ್ಣ ರಾವ್ ನನ್ನು ಬಂಧಿಸಲಾಗಿದೆ.
ಈ ಹಿಂದೆ ಹೂಡಿಕೆ ಹೆಸರಲ್ಲಿ ರಾಹುಲ್ ತೋನ್ಸೆ ವಂಚನೆ ಮಾಡಿದ್ದಾನೆ ಎಂದು ಆರೋಪಿಸಿ ನಟಿ ಸಂಜನಾ ಗಲ್ರಾನಿ ಇಂದಿರಾ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಕ್ಯಾಸಿನೋ ಹೂಡಿಕೆ ಹೆಸರಲ್ಲಿ ವಿವೇಕ್ ಹೆಗ್ಡೆ ಹಾಗೂ ಅವರ ಸ್ನೇಹಿತರಿಗೆ 25.5 ಕೋಟಿ ವಂಚನೆ ಪ್ರಕರಣ ದಾಖಲಾಗಿದೆ.