ನವದೆಹಲಿ : ದೇಶದ ಗಮನ ಸೆಳೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮತ ಎಣಿಕೆ ನಡೆಯುತ್ತಿದ್ದು , ಕಲ್ಕಾಜಿ ಕ್ಷೇತ್ರದಲ್ಲಿ ಹಾಲಿ ಸಿಎಂ ಅತಿಶಿಗೆ ಗೆಲುವಾಗಿದೆ.
ಬಿಜೆಪಿಯ ರಮೇಶ್ ಬಿಧುರಿ ವಿರುದ್ಧ ಕಲ್ಕಾಜಿ ಕ್ಷೇತ್ರದಲ್ಲಿ ಹಾಲಿ ಸಿಎಂ ಅತಿಶಿಗೆ ಗೆಲುವಾಗಿದೆ.
ಚುನಾವಣಾ ಫಲಿತಾಂಶದಲ್ಲಿ ಮೊದಲು ಭಾರಿ ಹಿನ್ನಡೆ ಅನುಭವಿಸಿದ ದಿಲ್ಲಿ ಸಿಎಂ ಅತಿಶಿ ಗೆಲವು ಸಾಧಿಸಿದ್ದಾರೆ. ಆದರೆ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರವಾಲ್, ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾಗೆ ಸೋಲಾಗಿದೆ.