ದಿವಂಗತ ಉದ್ಯಮಿ ರತನ್ ಟಾಟಾ ಅವರ ಇತ್ತೀಚೆಗೆ ತೆರೆಯಲಾದ ವಿಲ್ ಅವರ ಆಪ್ತ ವಲಯವನ್ನು ಆಘಾತಕ್ಕೀಡು ಮಾಡಿದೆ, ಏಕೆಂದರೆ ದಿವಂಗತ ಕೈಗಾರಿಕೋದ್ಯಮಿ ತಮ್ಮ ಉಳಿದ ಆಸ್ತಿಯ ಮೂರನೇ ಒಂದು ಭಾಗವನ್ನು (500 ಕೋಟಿ ರೂ.ಗಿಂತ ಹೆಚ್ಚು) ಹಾಸ್ಟೆಲ್ ಗೆಳೆಯನಿಗೆ ಬರೆದಿಟ್ಟಿದ್ದಾರೆ.
ಹೌದು. ಉದ್ಯಮಿ ರತನ್ ಟಾಟಾ ಆಸ್ತಿಯ ಮೂರನೇ ಒಂದು ಭಾಗವನ್ನು ಸುಮಾರು 500 ಕೋಟಿ ರೂ ಆಸ್ತಿಯನ್ನು ತಮ್ಮ ಹಾಸ್ಟೆಲ್ ಗೆಳೆಯ ಮೋಹಿನಿ ಮೋಹನ್ ದತ್ತಾ ಅವರ ಹೆಸರಿನಲ್ಲಿ ಬರೆದಿಟ್ಟಿರುವ ಅಚ್ಚರಿ ವಿಷಯ ಬೆಳಕಿಗೆ ಬಂದಿದೆ.
ಅವರು ಮೂಲತಃ ಜೆಮ್ಷೆಡ್ಪುರದ ಟ್ರಾವೆಲ್ ಕ್ಷೇತ್ರದ ಉದ್ಯಮಿ ಮೋಹಿನಿ ಮೋಹನ್ ದತ್ತಾ. ಈ ವಿಚಾರ ಟಾಟಾ ಕುಟುಂಬ ಮತ್ತು ಆಪ್ತರನ್ನು ಆಶ್ಚರ್ಯಗೊಳಿಸಿದೆ ಎಂದು ಈ ವಿಷಯದ ಬಗ್ಗೆ ತಿಳಿದಿರುವ ಅನೇಕ ಮೂಲಗಳು ಪ್ರಕಟಣೆಗೆ ತಿಳಿಸಿವೆ.
ಉಯಿಲಿನಲ್ಲಿ ಮೋಹನ್ ದತ್ತಾ ಅವರಿಗೆ ಸೇರಬೇಕಾದ ಆಸ್ತಿಯನ್ನು ಬರೆದಿಡಲಾಗಿದೆ. ಹಾಗೂ ಉಳಿದ ಆಸ್ತಿಯನ್ನು ತಮ್ಮ ಮನೆಕೆಲಸದವರು, ಪರಿವಾರ, ಸಹೋದರ, ಮಲ ಸಹೋದರ,ಸಾಕು ನಾಯಿಗೆ ಸಮಾನವಾಗಿ ಹಂಚಿದ್ದಾರೆ.
ಮೋಹಿನಿ ಮೋಹನ್ ದತ್ತಾ ಯಾರು?
1961ರಲ್ಲಿ ರತನ್ ಟಾಟಾ ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿ ಜಾರ್ಖಂಡ್ನ ಜಮ್ಷೆಡ್ಪುರದಲ್ಲಿರುವ ಟಾಟಾ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿದ್ದರು. ಈ ವೇಳೆ ಅವರಿಗೆ ಉಳಿದುಕೊಳ್ಳಲು ನೀಡಿದ್ದ ಟಾಟಾ ಸಮೂಹದ ಸಿಬ್ಬಂದಿ ಹಾಸ್ಟೆಲ್ನಲ್ಲಿ ರತನ್ಗೆ ದತ್ತಾ ಪರಿಚಯವಾಗಿದ್ದರು. ಅಲ್ಲಿಂದ ಆರಂಭವಾದ ಸ್ನೇಹ ಬಳಿಕ ವ್ಯಾಪಾರದಲ್ಲಿ ಪಾಲುದಾರಿಕೆಯಲ್ಲೂ ಮುಂದುವರೆದಿತ್ತು. ಅವರ ಕುಟುಂಬವು ಈ ಹಿಂದೆ 2013 ರಲ್ಲಿ ತಾಜ್ ಗ್ರೂಪ್ ಆಫ್ ಹೋಟೆಲ್ಸ್ನ ಭಾಗವಾದ ತಾಜ್ ಸರ್ವೀಸಸ್ನೊಂದಿಗೆ ವಿಲೀನಗೊಂಡ ಟ್ರಾವೆಲ್ ಏಜೆನ್ಸಿ ಸ್ಟಾಲಿಯನ್ ಅನ್ನು ಹೊಂದಿತ್ತು ಎಂದು ವರದಿ ತಿಳಿಸಿದೆ.
ಆರು ದಶಕಗಳ ಸುದೀರ್ಘ ಬಂಧ
ಟಾಟಾ ಗ್ರೂಪ್ನ ಒಳಗಿನವರ ಪ್ರಕಾರ, ದತ್ತಾ ಆಗಾಗ್ಗೆ ತಮ್ಮನ್ನು ಟಾಟಾ ಕುಟುಂಬಕ್ಕೆ ಹತ್ತಿರವಾಗಿ ಬಣ್ಣಿಸಿಕೊಂಡಿದ್ದಾರೆ. ಅಕ್ಟೋಬರ್ 2024 ರಲ್ಲಿ ರತನ್ ಟಾಟಾ ಅವರ ಅಂತ್ಯಕ್ರಿಯೆಯಲ್ಲಿ ಅವರು ರತನ್ ಟಾಟಾ ಅವರೊಂದಿಗಿನ ತಮ್ಮ ಬಂಧದ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ್ದರು. “ಅವರು 24 ವರ್ಷದವರಿದ್ದಾಗ ನಾವು ಮೊದಲ ಬಾರಿಗೆ ಜೆಮ್ಷೆಡ್ಪುರದ ಡೀಲರ್ಸ್ ಹಾಸ್ಟೆಲ್ನಲ್ಲಿ ಭೇಟಿಯಾದೆವು. ಅವರು ನನಗೆ ಸಹಾಯ ಮಾಡಿದರು ” ಎಂದು ದತ್ತಾ ಮಾಧ್ಯಮಗಳಿಗೆ ತಿಳಿಸಿದರು, ಆರು ದಶಕಗಳ ಸುದೀರ್ಘ ಒಡನಾಟವನ್ನು ಬಹಿರಂಗಪಡಿಸಿದರು.