ಅಮೆರಿಕದ ನ್ಯಾಯಾಲಯದಲ್ಲಿ ಶಾಂತಿಯುತ ದೃಶ್ಯವು ಹಠಾತ್ತಾಗಿ ಗದ್ದಲವಾಗಿ ಬದಲಾಗಿದೆ. ಕೊಲೆ ಆರೋಪಿ ತನ್ನ ಸಂಬಂಧಿಯನ್ನು ಕೊಂದನೆಂದು ಆರೋಪಿಸಿ ವ್ಯಕ್ತಿಯೊಬ್ಬ ನ್ಯಾಯಾಲಯದ ಗೇಟ್‌ನಿಂದ ಜಿಗಿದು ಆರೋಪಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಘಟನೆಯ ವಿಡಿಯೋ ವೈರಲ್ ಆಗಿದೆ.
ಏನಿದು ಘಟನೆ ?
ಆರೋಪಿ ಅಲೆಕ್ಸಾಂಡರ್ ಒರ್ಟಿಜ್ ವಿಚಾರಣೆಯ ವೇಳೆ, ಆಲಿಯಾನಾ ಫರ್ಫಾನ್ ಎಂಬುವರ ಚಿಕ್ಕಪ್ಪ ಕಾರ್ಲೋಸ್ ಲೂಸೆರೊ ಗ್ಯಾಲರಿಯಿಂದ ಇದ್ದಕ್ಕಿದ್ದಂತೆ ಒಳಗೆ ನುಗ್ಗಿ ಒರ್ಟಿಜ್‌ನನ್ನು ನೆಲಕ್ಕೆ ತಳ್ಳಿ ಹಲ್ಲೆ ನಡೆಸಿದ್ದಾರೆ. ಕೂಡಲೇ ಕೋರ್ಟ್ ಸಿಬ್ಬಂದಿ ಮಧ್ಯಪ್ರವೇಶಿಸಿ ಅವರನ್ನು ತಡೆದಿದ್ದಾರೆ.
ವಿಡಿಯೋದಲ್ಲಿ ಏನಿದೆ ?
ವಿಡಿಯೋದಲ್ಲಿ ಆರೋಪಿ ಅಲೆಕ್ಸಾಂಡರ್ ಒರ್ಟಿಜ್ ತನ್ನ ವಕೀಲ ಮತ್ತು ತಿದ್ದುಪಡಿ ಅಧಿಕಾರಿಯೊಂದಿಗೆ ಕೋಣೆಯ ಮಧ್ಯದಲ್ಲಿ ನಿಂತಿರುವುದು ಕಾಣಿಸುತ್ತದೆ. ಇದ್ದಕ್ಕಿದ್ದಂತೆ ಗ್ಯಾಲರಿಯಿಂದ ವ್ಯಕ್ತಿಯೊಬ್ಬ ಗೇಟ್ ದಾಟಿ ಒರ್ಟಿಜ್ ಕಡೆಗೆ ಧಾವಿಸಿದ್ದು, ಆತ 40 ವರ್ಷದ ಕಾರ್ಲೋಸ್ ಲೂಸೆರೊ ಎಂದು ಗುರುತಿಸಲಾಗಿದೆ. ಕಳೆದ ವರ್ಷ ಒರ್ಟಿಜ್ ಆಲಿಯಾನಾ, ಫರ್ಫಾನ್ ಅವರನ್ನು ಕೊಂದನೆಂದು ಆರೋಪಿಸಲಾಗಿದೆ.
ಲೂಸೆರೊ ಒರ್ಟಿಜ್‌ನನ್ನು ನೆಲಕ್ಕೆ ತಳ್ಳಿ ಹೊಡೆಯಲು ಪ್ರಾರಂಭಿಸುತ್ತಾರೆ. ಕೂಡಲೇ ಮತ್ತೊಬ್ಬ ವ್ಯಕ್ತಿ ಅವರೊಂದಿಗೆ ಸೇರಿಕೊಳ್ಳುತ್ತಾರೆ. ಈ ಸಮಯದಲ್ಲಿ, ನ್ಯಾಯಾಲಯದ ಅಧಿಕಾರಿಗಳು ಮಧ್ಯಪ್ರವೇಶಿಸಿ ಜಗಳವನ್ನು ನಿಲ್ಲಿಸಲು ಪ್ರಯತ್ನಿಸುತ್ತಾರೆ. ಆರೋಪಿಯ ತಂದೆ ಜೋರಾಯ್ ಒರ್ಟಿಜ್ ಸಹ ಜಗಳ ಬಿಡಿಸಲು ಮುಂದಾಗಿದ್ದಾರೆ.
ಅಂತಿಮವಾಗಿ, ಡೆಪ್ಯೂಟಿಗಳು ಜಗಳವನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದು ಲೂಸೆರೊ ಅವರನ್ನು ಬಂಧಿಸಿದ್ದಾರೆ. ವರದಿ ಪ್ರಕಾರ, ಬರ್ನಾಲಿಲ್ಲೊ ಕೌಂಟಿ ಶೆರಿಫ್ ಕಚೇರಿಯು ಲೂಸೆರೊ ಪೊಲೀಸರಿಗೆ ಒರ್ಟಿಜ್ “ನನ್ನ ಸಂಬಂಧಿಯನ್ನು ಹೇಡಿಯಂತೆ ಕೊಂದಿದ್ದು, ಅವನನ್ನು ಹೊಡೆಯುವುದು ಯೋಗ್ಯವಾಗಿತ್ತು” ಎಂದು ಹೇಳಿದ್ದಾರೆ.
Chaos broke out in a courtroom in New Mexico when the step-father and uncle of a murdered 23-year-old attacked the man on trial for killing her.https://t.co/PvflZqgeAP pic.twitter.com/24tQETbO4A
— Sky News (@SkyNews) February 4, 2025