![](https://kannadadunia.com/wp-content/uploads/2024/06/death.1.2681105.jpg)
ಹುಬ್ಬಳ್ಳಿ: ಗೃಹಣಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿ ನಡೆದಿದೆ.
ಶಭನಮ್ ಮೃತ ಮಹಿಳೆ. ನಿನ್ನೆ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯನ್ನು ಅಣ್ಣಿಗೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವನ್ನಪ್ಪಿದ್ದಾರೆ. ಮಹಿಳೆಯ ಕತ್ತಿನ ಬಾಗದಲ್ಲಿ ಗಾಯಗಳಾಗಿದ್ದು, ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಇನ್ನು ಮಹಿಳೆಯ ಪುಟ್ಟ ಮಗ ಅಮ್ಮನಿಗೆ ತಂದೆ ಹಾಗೂ ಅಜ್ಜಿ ಹೊಡೆದಿರುವುದಾಗಿ ಕಣ್ಣೀರಿಟ್ಟಿದ್ದಾನೆ. ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದ ಶಭನಮ್ ಗೆ ಪತಿ ಹಾಗೂ ಕುಟುಂಬದವರು ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.
ಅನುಮಾನಾಸ್ಪದವಾಗಿ ಶಭನಮ್ ಸಾವನ್ನಪ್ಪಿದ್ದು, ಶಭನಮ್ ಪತಿ ಸಾಮದಾನಿ ಗೌಸುಸಾಬ್, ಫಾತಿಮ ಅಮಾಬುಸಾಬ್, ದಾವಲ್ಮಾ ರಫಿಕ್ ವಿರುದ್ಧ ದೂರು ದಾಖಲಾಗಿದೆ.