alex Certify ಇಲ್ಲಿದೆ ಅಮೆರಿಕಾದ ಡಿಸೈನರ್, ಯುಪಿ ವಿದ್ಯಾರ್ಥಿಯ ವಿಶಿಷ್ಟ ʼಪ್ರೇಮಕಥೆʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಅಮೆರಿಕಾದ ಡಿಸೈನರ್, ಯುಪಿ ವಿದ್ಯಾರ್ಥಿಯ ವಿಶಿಷ್ಟ ʼಪ್ರೇಮಕಥೆʼ

ಕುಶಿನಗರ (ಉತ್ತರ ಪ್ರದೇಶ): ಪ್ರೀತಿ ಕುರುಡು ಎನ್ನುವುದಕ್ಕೆ ಈ ಸುದ್ದಿ ಸಾಕ್ಷಿ. ಅಮೆರಿಕಾದಲ್ಲಿ ಫ್ಯಾಶನ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದ ವಿಯೆಟ್ನಾಂ ಮೂಲದ ಯುವತಿ ಉತ್ತರ ಪ್ರದೇಶದ ವಿದ್ಯಾರ್ಥಿಯೊಬ್ಬನನ್ನು ಪ್ರೀತಿಸಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಈ ಅಪರೂಪದ ಪ್ರೇಮಕಥೆ ಕುಶಿನಗರದಲ್ಲಿ ನಡೆದಿದೆ.

ಕುಶಿನಗರದ ಸುಕರೌಲಿ ಅಭಿವೃದ್ಧಿ ಬ್ಲಾಕ್‌ನ ಪಿಡ್ರಘರ್ ದಾಸ್ ಗ್ರಾಮ ಪಂಚಾಯಿತಿಯ ಕೃಷ್ಣ ಮತ್ತು ಕ್ಯಾಲಿಫೋರ್ನಿಯಾದ ಸರ್ಮೆಂಟೊ ನಗರದ ಫ್ಯಾಶನ್ ಡಿಸೈನರ್ ಥುಯಿ ವೊ ಈಗ ದಂಪತಿಗಳು. ಥುಯಿ ಕ್ಯಾಲಿಫೋರ್ನಿಯಾದಲ್ಲಿ ವಾಸವಾಗಿದ್ದು ಫ್ಯಾಶನ್ ಡಿಸೈನಿಂಗ್ ಕೆಲಸ ಮಾಡುತ್ತಿದ್ದರು. ಇಬ್ಬರ ನಡುವಿನ ಮಾತುಕತೆ ಮತ್ತು ಪ್ರೀತಿ ಹೆಚ್ಚಾದ ಕಾರಣ ಥುಯಿ ಭಾರತದ ಕುಶಿನಗರಕ್ಕೆ ಬಂದು ಕೃಷ್ಣನನ್ನು ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ.

ಈ ವಿಶಿಷ್ಟ ಪ್ರೇಮಕಥೆ ಶುರುವಾಗಿದ್ದು ಫ್ರೀ ಫೈರ್ ಗೇಮ್‌ನಲ್ಲಿ. ಇಬ್ಬರೂ ಫ್ರೀ ಫೈರ್ ಗೇಮ್ ಮೂಲಕ ಭೇಟಿಯಾಗಿದ್ದು, ಕೊರೊನಾ ಅವಧಿಯಲ್ಲಿ ಇಬ್ಬರ ನಡುವೆ ಸ್ನೇಹ ಬೆಳೆದು ಪ್ರೀತಿಯಾಗಿ ಬದಲಾಯಿತು. ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ನಂತರ ಇಬ್ಬರೂ ಭೇಟಿಯಾಗಲು ನಿರ್ಧರಿಸಿದರು.

2021 ರಲ್ಲಿ ಯುವತಿ ದೆಹಲಿಗೆ ಬಂದಾಗ, ಯುವಕ ತನ್ನ ಕುಟುಂಬಕ್ಕೆ ಆಕೆಯನ್ನು ಪರಿಚಯಿಸಿದನು. ನಂತರ, ಎರಡೂ ಕುಟುಂಬಗಳ ನಡುವೆ ಮಾತುಕತೆಗಳು ಪ್ರಾರಂಭವಾಗಿದ್ದು, 2023 ರ ದೀಪಾವಳಿ ಸಂದರ್ಭದಲ್ಲಿ, ಯುವತಿ ತನ್ನ ಸ್ನೇಹಿತನೊಂದಿಗೆ ಯುವಕನ ಹಳ್ಳಿಗೆ ಬಂದು ಅಲ್ಲಿನ ಜೀವನಶೈಲಿ ಮತ್ತು ಪದ್ಧತಿಗಳನ್ನು ಅರ್ಥಮಾಡಿಕೊಂಡಳು.

ನಂತರ ಯುವತಿ ತನ್ನ ಪ್ರೇಮಿಯನ್ನು ವಿಯೆಟ್ನಾಂಗೆ ಕರೆದುಕೊಂಡು ಹೋಗಿ ತನ್ನ ತಂದೆ ಟ್ಯಾನ್ ತಹಾನ್ ವೊಗೆ ಪರಿಚಯಿಸಿದ್ದು, ವರದಿಯ ಪ್ರಕಾರ, ಕುಶಿನಗರದ ನಿವಾಸಿ ಕೃಷ್ಣ ಪ್ರಸ್ತುತ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದಾರೆ. ಥುಯಿ ಅಮೆರಿಕಾದಲ್ಲಿ ಡಿಸೈನರ್ ಆಗಿದ್ದು, ಅವರ ಸಂಬಳ 9 ಸಾವಿರ ಡಾಲರ್ ಗಳಾಗಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...