alex Certify ಪ್ರವಾಸಿಗರಿಗೆ ಗುಡ್ ನ್ಯೂಸ್: ‘ಕರ್ನಾಟಕದ ಕಾಶ್ಮೀರ’ದ ಸಮಗ್ರ ಮಾಹಿತಿ ಹೊಂದಿರುವ ಅಧಿಕೃತ ವೆಬ್ಸೈಶಟ್ ಬಿಡುಗಡೆ ಮಾಡಿದ ಸಿಎಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರವಾಸಿಗರಿಗೆ ಗುಡ್ ನ್ಯೂಸ್: ‘ಕರ್ನಾಟಕದ ಕಾಶ್ಮೀರ’ದ ಸಮಗ್ರ ಮಾಹಿತಿ ಹೊಂದಿರುವ ಅಧಿಕೃತ ವೆಬ್ಸೈಶಟ್ ಬಿಡುಗಡೆ ಮಾಡಿದ ಸಿಎಂ

ಮಡಿಕೇರಿ: ಕೊಡಗು ಪ್ರಯಾಣ ಅನುಭವಗಳಿಗಾಗಿ ವಿಶ್ವಾಸಾರ್ಹ ಮೂಲ- ಪ್ರವಾಸೋದ್ಯಮ ಇಲಾಖೆಯ ಅಧಿಕೃತ  ವೆಬ್‍ಸೈಟ್ explorekodagu.com ಅನ್ನು ಸಿಎಂ ಸಿದ್ಧರಾಮಯ್ಯ ಬಿಡುಗಡೆ ಮಾಡಿದ್ದಾರೆ.

ಕೊಡಗು ಪ್ರವಾಸೋದ್ಯಮದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜಿಲ್ಲೆಯ ಸಮಗ್ರ ಮಾಹಿತಿ ಹೊಂದಿರುವ ಅಧಿಕೃತ ವೆಬ್‍ಸೈಟ್ ಬಿಡುಗಡೆ ಮಾಡಲಾಗಿದೆ.

ಈ ವೆಬ್‍ಸೈಟ್ ಕೊಡಗಿನ ಸುಂದರ ಪ್ರವಾಸಿ ತಾಣಗಳನ್ನು ಅತ್ಯುತ್ತಮವಾಗಿ ಪ್ರದರ್ಶಿಸಲು ಮೀಸಲಾಗಿರುವ ಸಮಗ್ರ ಆನ್‍ಲೈನ್ ವೇದಿಕೆಯಾಗಿದೆ. ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಉತ್ತಮ ಗುಣಮಟ್ಟದ, ವಿಶ್ವಾಸಾರ್ಹ ಪ್ರಯಾಣ ಅನುಭವವನ್ನು ಖಚಿತಪಡಿಸಿಕೊಳ್ಳಲು ವೆಬ್‍ಸೈಟ್‍ನಲ್ಲಿ ಅಧಿಕೃತವಾಗಿ ನೋಂದಾಯಿತ ಮತ್ತು ಪ್ರಮಾಣೀಕೃತ ಹೋಂಸ್ಟೇಗಳು, ರೆಸಾರ್ಟ್‍ಗಳು, ರೆಸ್ಟೋರೆಂಟ್‍ಗಳು, ಪ್ರವಾಸಿ ಮಾರ್ಗದರ್ಶಿಗಳು, ಟ್ಯಾಕ್ಸಿ ನಿರ್ವಾಹಕರು ಮತ್ತು ಜಿಲ್ಲೆಯ ಅಧೀಕೃತ ಕಾರ್ಯ ಕ್ರಮಗಳನ್ನು ಮಾತ್ರ ಪಟ್ಟಿ ಮಾಡಲಾಗಿರುತ್ತದೆ.

 ವೆಬ್‍ಸೈಟ್‍ನಲ್ಲಿ ಪ್ರಮುಖ ಲಕ್ಷಣಗಳು:

ಜಿಲ್ಲೆಯ ನೋಂದಾಯಿತ ಹೋಂಸ್ಟೇಗಳು ಮತ್ತು ರೆಸಾರ್ಟ್‍ಗಳು ಕೊಡಗು ಪ್ರವಾಸೋದ್ಯಮ ಕಚೇರಿಯಲ್ಲಿ ಅಧಿಕೃತವಾಗಿ ನೋಂದಾಯಿಸಲಾದ ಹೋಂ-ಸ್ಟೇಗಳ ವಿವರಗಳನ್ನು ನೀಡಲಾಗಿದೆ. ಇದು ಪ್ರವಾಸಿಗರಿಗೆ ವಿಶ್ವಾಸಾರ್ಹ ಮತ್ತು ಸುರಕ್ಷಿತ ಅನುಭವವನ್ನು ಖಾತರಿಪಡಿಸುತ್ತದೆ.

FSSAI ಪ್ರಮಾಣೀಕೃತ ರೆಸ್ಟೋರೆಂಟ್ ಗಳು:

ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(FSSAI) ಪ್ರಮಾಣೀಕರಿಸಿದ ರೆಸ್ಟೋರೆಂಟ್ ಗಳ ವಿವರವನ್ನು ಮಾತ್ರ ವೈಶಿಷ್ಟ್ಯಗೊಳಿಸಲಾಗುತ್ತದೆ.

ಅನುಮೋದಿತ ಪ್ರವಾಸಗಳು:

ಪ್ರವಾಸೋದ್ಯಮ ನೀತಿ 2025-29 ಅಡಿಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಗುರುತಿಸಲ್ಪಟ್ಟ 778 ಪ್ರವಾಸಿ ತಾಣಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಗುರುತಿಸಿದ 23 ಪ್ರವಾಸಿ ತಾಣಗಳನ್ನು ಹಾಗೂ ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ, ಕೊಡಗು ಜಿಲ್ಲೆಯ ಮುಖಾಂತರ ಗುರುತಿಸಿರುವ ಪ್ರವಾಸಿ ತಾಣಗಳನ್ನು ಮಾತ್ರ ಪಟ್ಟಿ ಮಾಡಲಾಗಿದೆ.

ಪ್ರವಾಸಿ ಮಾಹಿತಿ:

explorekodagu.com ಅಧಿಕೃತ ವೆಬ್‍ಸೈಟ್ ಕೊಡಗು ಜಿಲ್ಲೆಯಲ್ಲಿ ಭೇಟಿ ನೀಡಬೇಕಾದ  ಪ್ರವಾಸಿ ತಾಣಗಳ ಬಗ್ಗೆ ಅಮೂಲ್ಯವಾದ ಮಾಹಿತಿಯನ್ನು ನೀಡುತ್ತದೆ. ಪ್ರಯಾಣಿಕರು ತಮ್ಮ ಪ್ರವಾಸವನ್ನು ಆಯೋಜಿಸಲು ಅಗತ್ಯವಿರುವ ಎಲ್ಲಾ ವಿವರಗಳನ್ನು ಹೊಂದಿದೆ.

ಪ್ರವಾಸಿ ಮಾರ್ಗದರ್ಶಿಗಳು:

ಪ್ರವಾಸೋದ್ಯಮವನ್ನು ಅಭಿವೃದ್ಧಿ ಹಾಗೂ ಪ್ರಚಾರ ಪಡಿಸುವ ಉದ್ದೇಶದಿಂದ ಜಿಲ್ಲೆಯ ಪ್ರವಾಸಿ ತಾಣಗಳ ಐತಿಹಾಸಿಕ, ಧಾರ್ಮಿಕ, ಸಾಹಿತ್ಯಕ, ಸಾಂಸ್ಕೃತಿಕ ಹಾಗೂ ಕಲಾವೈವಿಧ್ಯತೆಗಳನ್ನು ಒಳಗೊಂಡ ಸೃಜನಶೀಲತೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ದೇಶ/ವಿದೇಶಿ ಪ್ರವಾಸಿಗರಿಗೆ ನೀಡಲು ಅಂದರೆ ‘ಒಂದು ರಾಜ್ಯ-ಹಲವು ವಿಸ್ಮಯಗಳು’ ಎಂಬುದನ್ನು ಪರಿಚಯಿಸುವುದರ ಮೂಲಕ ಜಿಲ್ಲೆಯ ಸಮಗ್ರತೆಯ ಬಗ್ಗೆ ವಿವಿಧ ಆಯಾಮಗಳ ಮೂಲಕ ಪ್ರವಾಸಿಗರನ್ನು ಕೊಡಗು ಜಿಲ್ಲೆಗೆ ಸೆಳೆಯಲು ಸ್ಥಳೀಯ ಪ್ರವಾಸಿ ಸಂಪನ್ಮೂಲಗಳ ಬಗ್ಗೆ ಜ್ಞಾನ ಮತ್ತು ಅನುಭವವಿರುವ     ಪ್ರವಾಸಿ ಮಾರ್ಗದರ್ಶಿಗಳಿಗೆ ಪ್ರವಾಸೋದ್ಯಮ ಕೇಂದ್ರ ಕಚೇರಿಯಿಂದ ತರಭೇತಿ ನೀಡಲಾದ ಪ್ರವಾಸಿ ಮಾರ್ಗದರ್ಶಿಗಳ ಪಟ್ಟಿಯನ್ನು ಮಾತ್ರ ಪ್ರಕಟಿಸಲಾಗುವುದು.

ಅನುಮೋದಿತ ಟೂರ್ ಅಂಡ್ ಟ್ರಾವೆಲ್ ಆಪರೇಟರ್ ಗಳು:

ಸುರಕ್ಷಿತ ಮತ್ತು ವಿಶ್ವಾಸರ್ಹ ಸಾರಿಗೆ ಆಯ್ಕೆಗಳನ್ನು ನೀಡುವ ಸ್ಥಾಪಿತ ಪ್ರಯಾಣ ಮಾರ್ಗಸೂಚಿಗಳನ್ನು ಪಾಲಿಸುವ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಾಯಿಸಿರುವ ಅನುಮೋದಿತ ಟೂರ್ ಅಂಡ್ ಟ್ರಾವೆಲ್ ಆಪರೇಟರ್ಗಳ ವಿವರಗಳನ್ನು ನೀಡಲಾಗಿದೆ.

ಅಧಿಕೃತ ಕಾರ್ಯಕ್ರಮಗಳು:

ಜಿಲ್ಲಾಧಿಕಾರಿಗಳು ಕೊಡಗು ಜಿಲ್ಲೆಯವರು ಅನುಮೋದಿಸಲಾದ ಕಾರ್ಯಕ್ರಮಗಳನ್ನು ಮಾತ್ರ ವೆಬ್ಸೈಟ್ನಲ್ಲಿ ಪಟ್ಟಿ ಮಾಡಲಾಗುತ್ತದೆ, ಪ್ರಚಾರ ಮಾಡಲಾದ ಕಾರ್ಯಕ್ರಮಗಳ ವಿವರವು ಕಾನೂನುಬದ್ಧತೆ ಮತ್ತು ಗುಣಮಟ್ಟವನ್ನು ಖಾತರಿಪಡಿಸುತ್ತದೆ.

ಕಸ್ಟಮೈಸ್ ಗೊಳಿಸಬಹುದಾದ   ಪಟ್ಟಿಗಳು:

ಜಿಲ್ಲೆಯ ಹೋಂಸ್ಟೇಗಳು, ರೆಸಾರ್ಟ್‍ಗಳು, ರೆಸ್ಟೋರೆಂಟ್‍ಗಳು ಹಾಗೂ ಇತರೆ ಪ್ರವಾಸಿ ಉತ್ಪನ್ನಗಳನ್ನು  ಮಾಲೀಕರು  ಫೋಟೋ, ಫೋನ್ ನಂಬರ್ ಇತರೇ ಅಗತ್ಯ ವಿವರಗಳನ್ನು ತಮ್ಮ ಹಂತದಲ್ಲಿ ವೆಬ್‍ಸೈಟ್‍ಗೆ ಸೇರಿಸಲು ಅವಕಾಶ ಕಲ್ಪಿಸಲಾಗಿದೆ. ನಂತರ, ಬದಲಾವಣೆಗಳನ್ನು ಪ್ರವಾಸೋದ್ಯಮ ಇಲಾಖೆಯು ವೆಬ್‍ಸೈಟ್‍ನಲ್ಲಿ ಪ್ರದರ್ಶಿಸುವ ಮೊದಲು ಇಲಾಖೆಯಿಂದ ಪರಿಶೀಲಿಸಿ ವಿವರಗಳನ್ನು ಅನುಮೋದನೆಗೊಳಿಸಲಾಗುತ್ತದೆ.

ಕೊಡಗಿನ ಪ್ರವಾಸಿಗರು ಮತ್ತು ಸ್ಥಳೀಯ ವ್ಯವಹಾರಗಳಿಗೆ ವಿಶ್ವಾಸಾರ್ಹ, ಪಾರದರ್ಶಕ ಮತ್ತು ಸುಸಂಘಟಿತ ಸಂಪನ್ಮೂಲವನ್ನು ಒದಗಿಸುವ ಗುರಿಯನ್ನು ಹೊಂದಿದೆ, ಎಲ್ಲಾ ಪ್ರಯಾಣಿಕರಿಗೆ ಆನಂದದಾಯಕ ಮತ್ತು ಸುರಕ್ಷಿತ ಭೇಟಿಯನ್ನು ಖಚಿತಪಡಿಸಿಕೊಳ್ಳುವಾಗ ಸುಸ್ಥಿರ, ಜವಾಬ್ದಾರಿಯುತ ಹಾಗೂ ಪರಿಸರ ಪ್ರವಾಸೋದ್ಯಮ ವ್ಯವಸ್ಥೆಯನ್ನು ಬೆಳೆಸಲು ಸಹಕಾರಿಯಾಗಿದೆ.

ನೂತನ ಸಾಮಾಜಿಕ ಜಾಲತಾಣ ಉದ್ಘಾಟನೆ: 

ಜಿಲ್ಲೆಯ ಸಮಗ್ರ ಮಾಹಿತಿ ಹೊಂದಿರುವ ಅಧಿಕೃತ  Facebook  ಹಾಗೂ  instagram ಗಳನ್ನು ಉದ್ಘಾಟಿಸಿಲಾಯಿತು.

https://www.instagram.com/kodagutourismofficial?igsh=OGh2M25mb3A1a3Zy

https://www.facebook.com/profile.php?id=61572412061627

ಹೆಚ್ಚಿನ ಮಾಹಿತಿಗೆ www.explorekodagu.com ಗೆ ಭೇಟಿ ನೀಡಿ ಅಥವಾ ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು, ಜಿಲ್ಲಾ ಪ್ರವಾಸೋದ್ಯಮ, ಅಭಿವೃದ್ಧಿ ಸಮಿತಿ, ಕೊಡಗು ಜಿಲ್ಲೆ, ಉಪ ನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ,  ಸ್ಟುವರ್ಟ್ ಹಿಲ್ ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ 571201 ದೂರವಾಣಿ ಸಂಖ್ಯೆ: 08272-200519 ಅಥವಾ ಈ-ಮೇಲ್  ddkodagutourism@gmail.com ಗೆ ಸಂಪರ್ಕಿಸಬಹುದು ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರಾದ ಅನಿತಾ ಭಾಸ್ಕರ್ ಅವರು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...