HomeKarnatakaGOOD NEWS : 'CET’ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್...

GOOD NEWS : ‘CET’ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ವಿಶೇಷ ಶಿಷ್ಯ ವೇತನಕ್ಕೆ ಅರ್ಜಿ ಆಹ್ವಾನ.!

ಬೆಂಗಳೂರು : ‘CET’ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಂದ ವಿಶೇಷ ಶಿಷ್ಯ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

2023ನೇ CET ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ 2023-24ನೇ ಸಾಲಿನಲ್ಲಿ ವೈದ್ಯಕೀಯ, ಇಂಜಿನಿಯರ್, ಕೃಷಿ ಹಾಗೂ ಪಶುವಿಜ್ಞಾನ ಕೋರ್ಸ್ಗಳಿಗೆ ಪ್ರಥಮ ವರ್ಷಕ್ಕೆ ದಾಖಲಾದ ವಿದ್ಯಾರ್ಥಿಗಳಿಗೆ ವಿಶೇಷ ಶಿಷ್ಯವೇತನವನ್ನು ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿಯ ವತಿಯಿಂದ 04 ವರ್ಷಕ್ಕೆ ಶಿಷ್ಯವೇತನ ನೀಡಲಾಗುತ್ತಿದೆ.
ದಿನಾಂಕ: 14-02-2022ರಂದು ನಡೆದ ರಾಜ್ಯ ಸಮಿತಿ ಸಭೆಯಲ್ಲಿ ಶಿಕ್ಷಕರ/ಉಪನ್ಯಾಸಕರ ಮಕ್ಕಳಿಗೆ ಸದರಿ ಧನಸಹಾಯವನ್ನು ನೀಡಲು ಅನುಮೋದನೆಯಾಗಿರುತ್ತದೆ. ಅದರಂತೆ 2023ನೇ ಸಾಲಿನ CET ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ 2023-24ನೇ ಸಾಲಿನಲ್ಲಿ ವೈದ್ಯಕೀಯ, ಇಂಜಿನಿಯರ್, ಕೃಷಿ ಮತ್ತು ಪಶುವಿಜ್ಞಾನ ಕೋರ್ಸ್ಗಳಿಗೆ ಪ್ರಥಮ ವರ್ಷಕ್ಕೆ ದಾಖಲಾಗಿ 2024ನೇ ಸಾಲಿನಲ್ಲಿ ಪ್ರಥಮ ವರ್ಷ ಉತ್ತೀರ್ಣರಾದ ಶಿಕ್ಷಕರ ಮಕ್ಕಳಿಂದ ಸದರಿ ವಿಶೇಷ ಶಿಷ್ಯವೇತನಕ್ಕೆ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿಯಿಂದ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಈ ಕೆಳಕಂಡ ಷರತ್ತುಗಳಿಗೊಳಪಟ್ಟಂತೆ ಶಿಕ್ಷಕರ ಮಕ್ಕಳಿಗೆ 04 ವರ್ಷಕ್ಕೆ ಶಿಷ್ಯವೇತನ ನೀಡಲಾಗುತ್ತದೆ.

1. ವಿದ್ಯಾರ್ಥಿಯು 2022-23ನೇ ಸಾಲಿನಲ್ಲಿ ಸರ್ಕಾರಿ/ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅರ್ಹತಾ ಪರೀಕ್ಷೆಯೂ ಸೇರಿದಂತೆ ಒಟ್ಟಾರೆ (ಅಗ್ರಿಗೇಟ್) ಗರಿಷ್ಠ ಅಂಕಗಳಿಸಿ ಪರೀಕ್ಷಾ ಪ್ರಾಧಿಕಾರದಿಂದ ಹಂಚಿಕೆಯಾದ ಕಾಲೇಜಿನಲ್ಲಿ 2023-24ನೇ ಸಾಲಿನಲ್ಲಿ ದಾಖಲಾತಿ ಹೊಂದಿರಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2. ವಿದ್ಯಾರ್ಥಿಯು 1 ರಿಂದ 12ನೇ ತರಗತಿಯವರೆಗೆ ಸರ್ಕಾರಿ/ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಕರ್ನಾಟಕದಲ್ಲಿಯೇ ಪೂರೈಸಿರಬೇಕು. 1 ರಿಂದ 12ನೇ ತರಗತಿಯವರೆಗೆ ಕರ್ನಾಟಕದಲ್ಲಿಯೇ ವ್ಯಾಸಂಗ ಮಾಡಿರುವ ಬಗ್ಗೆ ಸಂಬಂಧಿಸಿದ ಶಾಲಾ ಮುಖ್ಯ ಶಿಕ್ಷಕರಿಂದ/ಪ್ರಾಂಶುಪಾಲರಿಂದ ಪಡೆದ ವ್ಯಾಸಂಗ ಪ್ರಮಾಣ ಪತ್ರವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ದೃಢೀಕರಿಸಿ Online ಮುಖಾಂತರ Upload ಮಾಡಬೇಕು.

3. ವಿದ್ಯಾರ್ಥಿಯು ವೃತ್ತಿಪರ ಶಿಕ್ಷಣವನ್ನು ಪೂರ್ಣಗೊಳಿಸುವವರೆಗೂ ವರ್ಷಕ್ಕೊಮ್ಮೆ/ಪ್ರತಿ ಸೆಮಿಸ್ಟರ್ನಲ್ಲಿ ಕನಿಷ್ಠ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ ದೃಢೀಕೃತ ಅಂಕಪಟ್ಟಿಗಳ ಪ್ರತಿಯನ್ನು ವ್ಯಾಸಂಗ ಮಾಡಿರುವ ಸಂಸ್ಥೆಯ ಮುಖ್ಯಸ್ಥರಿಂದ ದೃಢೀಕರಿಸಿ Upload ಮಾಡಬೇಕು.

4. ವಿದ್ಯಾರ್ಥಿಯು ತನ್ನ ಕೋರ್ಸ್ ಅವಧಿಯಲ್ಲಿ ಪ್ರಥಮ ದರ್ಜೆಗಿಂತಲೂ ಕಡಿಮೆ ಅಂಕ ಗಳಿಸಿ ಉತ್ತೀರ್ಣರಾಗಿದ್ದಲ್ಲಿ ಆ ಅವಧಿಯಿಂದ ಶಿಷ್ಯವೇತನವನ್ನು ಮುಂದುವರಿಸಲಾಗುವುದಿಲ್ಲ.

5. ವೃತ್ತಿಪರ ಶಿಕ್ಷಣ ಶಿಷ್ಯವೇತನ ಪಡೆಯಲು Online ಮುಖಾಂತರ ಕಾಲೇಜು ಮುಖ್ಯಸ್ಥರ ಸೂಕ್ತ ಶಿಫಾರಸ್ಸಿನೊಂದಿಗೆ (ಸಹಿ ಮತ್ತು ಮೊಹರಿನೊಂದಿಗೆ) ದೃಢೀಕರಿಸಿ ಪ್ರತಿಯನ್ನು Upload ಮಾಡಬೇಕು.
6. ಆಯಾ ಸಾಲಿನಲ್ಲಿ ವ್ಯಾಸಂಗ ಪ್ರಮಾಣ ಪತ್ರವನ್ನು ಕಾಲೇಜು ಮುಖ್ಯಸ್ಥರ ಸೂಕ್ತ ಶಿಫಾರಸ್ಸಿನೊಂದಿಗೆ (ಸಹಿ ಮತ್ತು ಮೊಹರಿನೊಂದಿಗೆ) ದೃಢೀಕರಿಸಿ Upload ಮಾಡಬೇಕು. ಹಾಗೂ ಪ್ರತಿಗಳನ್ನು ನಿಧಿಗಳ ಕಛೇರಿಗೆ ಸಲ್ಲಿಸುವುದು.

7. CBSE/ICSE ಪಠ್ಯಕ್ರಮ ಹೊರತುಪಡಿಸಿ ರಾಜ್ಯ ಪಠ್ಯಕ್ರಮ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸತಕ್ಕದು.
ಈ ಮೇಲ್ಕಂಡ ಎಲ್ಲಾ ಷರತ್ತಿನಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸುವುದು. ಅದರಂತೆ ០៩ ៨៨ MBBS-25, BE-25, BSC-Agriculture-10 CET BVSC-10 ಒಟ್ಟು 70 ವಿದ್ಯಾರ್ಥಿಗಳಿಗೆ ಧನಸಹಾಯ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆನ್ ಲೈನ್ ನಲ್ಲಿ ದಿನಾಂಕ: 01-02-2025 ರಿಂದ 15-02-2025ರವರೆಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.

ಅರ್ಹ ವಿದ್ಯಾರ್ಥಿಗಳು ನಿಯಂತ್ರಣಾಧಿಕಾರಿಗಳ ಶಿಫಾರಸ್ಸಿನೊಂದಿಗೆ ದಿನಾಂಕ: 15-02-2025 .ರೊಳಗೆ ಈ ಕಛೇರಿಗೆ ಪ್ರಸ್ತಾವನೆಯನ್ನು Online ಮುಖಾಂತರ ಸಲ್ಲಿಸಲು ತಿಳಿಸಿದೆ. ಹಾಗೂ ಪ್ರಸ್ತಾವನೆಯನ್ನು ನಿಧಿಗಳ ಕಛೇರಿಗೆ ಸಲ್ಲಿಸಲು ಕೊನೆಯ ದಿನಾಂಕ: 20-02-2025. ಇಲಾಖಾ ವೆಬ್ಸೈಟ್ www.schooleducation.kar.nic.in SWF/TWF ONLINE SERVICE ಈಗಾಗಲೇ Online ಮುಖಾಂತರ ಅಜೀವ ಸದಸ್ಯತ್ವ (LIFE MEMBERSHIP CARD) ಪಡೆದಿರುವ ಶಿಕ್ಷಕರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಅಂತಿಮ ದಿನಾಂಕದ ನಂತರ ಸ್ವೀಕೃತವಾಗುವ ಪ್ರಸ್ತಾವನೆಯನ್ನು ಪರಿಗಣಿಸಲಾಗುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular