HomeKarnatakaಶಿಂಷಾ ನದಿಯಲ್ಲಿ ತೇಲಿಬಂದ ಪ್ಲಾಸ್ಟಿಕ್ ಚೀಲದ ಮೂಟೆ: ತೆರೆದು ನೋಡಿದ ಮೀನುಗಾರರು ಶಾಕ್: ಮಹಿಳೆಯ ಶವ...

ಶಿಂಷಾ ನದಿಯಲ್ಲಿ ತೇಲಿಬಂದ ಪ್ಲಾಸ್ಟಿಕ್ ಚೀಲದ ಮೂಟೆ: ತೆರೆದು ನೋಡಿದ ಮೀನುಗಾರರು ಶಾಕ್: ಮಹಿಳೆಯ ಶವ ಕಂಡು ಕಂಗಾಲು

ಮಂಡ್ಯ: ಶಿಂಷಾ ನದಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಶ್ರೀ ಸೋಮೇಶ್ವರ ಸಮುದಾಯ ಭವನದ ಬಳಿ ನಡೆದಿದೆ.

ಶಿಂಷಾ ನದಿಯ ಕೊಲ್ಲಿ ಹಳ್ಳದ ನೀರೀನಲ್ಲಿ ಮೀನು ಹಿಡಿಯಲು ಹೋಗಿದ್ದ ಮೀನುಗಾರರಿಗೆ ನದಿಯಲ್ಲಿ ಪ್ಲಾಸ್ಟಿಕ್ ಚೀಲದ ಮೂಟೆ ತೇಲಿಬರುತ್ತಿರುವುದನ್ನು ಕಂಡು ಅನುಮಾನಗೊಂಡಿದ್ದಾರೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ಪ್ಲಾಸ್ಟಿಕ್ ಚೀಲವನ್ನು ಹೊರತೆಗೆದು ನೋಡಿದಾಗ ಶಾಕ್ ಆಗಿದೆ. ಮಹಿಳೆಯೊಬ್ಬರ ಶವ ಮೂಟೆಯಲ್ಲಿ ಪತ್ತೆಯಾಗಿದೆ. ದುಷ್ಕರ್ಮಿಗಳು ಸುಮಾರು 35 ವರ್ಷದ ಮಹಿಳೆಯನ್ನು ಹತ್ಯೆಗೈದು, ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಮಲಗಿಸಿ, ತಲೆ, ಎದೆ, ಕಾಲುಗಳಿಗೆ ಕಲ್ಲುಗಳನ್ನು ಕಟ್ಟಿ ಚೀಲದಲ್ಲಿ ಸುತ್ತಿ ಕೊಲ್ಲಿಹಳ್ಳದಲ್ಲಿ ಎಸೆದು ಹೋಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶವವನ್ನು ಮದ್ದೂರು ಪೊಲೀಸರು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular