HomeKarnatakaಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: ಪಹಣಿ ರೀತಿ ಖಾಸಗಿ ಸೈಬರ್ ಕೆಫೆಗಳಲ್ಲೂ ಇ-ಖಾತಾ ವಿತರಣೆ

ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: ಪಹಣಿ ರೀತಿ ಖಾಸಗಿ ಸೈಬರ್ ಕೆಫೆಗಳಲ್ಲೂ ಇ-ಖಾತಾ ವಿತರಣೆ

ಬೆಂಗಳೂರು: ಶೀಘ್ರವೇ ಸೈಬರ್ ಕೆಫೆಗಳಲ್ಲಿಯೂ ಇ-ಖಾತಾ ವಿತರಿಸಲು ಆದೇಶ ಹೊರಡಿಸಲಾಗುವುದು. ಇ-ಖಾತಾ ವಿತರಣೆ ವ್ಯವಸ್ಥೆಗೆ ವೇಗ ನೀಡಲು ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿ, ಬೆಂಗಳೂರು ಒನ್ ಕೇಂದ್ರಗಳ ಜೊತೆಗೆ ಖಾಸಗಿ ಸೈಬರ್ ಕೆಫೆಗಳಲ್ಲಿ ಇ-ಖಾತಾ ವಿತರಿಸಲು ಆದೇಶ ಹೊರಡಿಸಲಾಗುವುದು ಎಂದು ಹೇಳಲಾಗಿದೆ.

ಆಸ್ತಿಗಳ ದಾಖಲೆ ನಕಲು ಮಾಡಿ ಮಾರಾಟ ಸೇರಿ ಮತ್ತಿತರ ಅಕ್ರಮ ತಡೆಗೆ ಆಸ್ತಿಗಳಿಗೆ ಇ-ಖಾತಾ ನೀಡಲಾಗುತ್ತಿದೆ. ಅಂತೆಯೇ ಬೆಂಗಳೂರು ವ್ಯಾಪ್ತಿಯಲ್ಲಿ 22 ಲಕ್ಷಕ್ಕೂ ಹೆಚ್ಚಿನ ಆಸ್ತಿಗಳಿಗೆ ಇ-ಖಾತಾ ವಿತರಿಸುತ್ತಿದ್ದು, ಇದುವರೆಗೆ ಒಂದು ಲಕ್ಷ ಆಸ್ತಿಗಳಿಗೆ ಇ-ಖಾತಾ ವಿತರಣೆ ಕಾರ್ಯ ಪೂರ್ಣಗೊಂಡಿದೆ. ಸದ್ಯ ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿ, ಬೆಂಗಳೂರು ಒನ್ ಕೇಂದ್ರಗಳಲ್ಲಿ ಇ-ಖಾತಾ ವಿತರಿಸಲಾಗುತ್ತಿದೆ. ಈ ಕಾರ್ಯ ನಿರೀಕ್ಷಿತ ಮಟ್ಟದಲ್ಲಿ ಮುಟ್ಟಿಲ್ಲ. ಹೀಗಾಗಿ ಖಾಸಗಿ ಸೈಬರ್ ಕೇಂದ್ರಗಳ ಮೂಲಕ ಇ-ಖಾತಾ ವಿತರಿಸಲು ಬಿಬಿಎಂಪಿ ಮುಂದಾಗಿದೆ.

ರಾಜ್ಯದಲ್ಲಿ ಕಂದಾಯ ಇಲಾಖೆ ಪಹಣಿ ವಿತರಣೆ ಕಾರ್ಯವನ್ನು ಖಾಸಗಿಯವರಿಗೂ ನೀಡಲಾಗಿದೆ. ಅದೇ ಮಾದರಿಯಲ್ಲಿ ಇ-ಖಾತಾ ವಿತರಿಸಲು ಚಿಂತನೆ ನಡೆದಿದೆ. ಬಿಬಿಎಂಪಿಯಲ್ಲಿ ನೋಂದಾಯಿಸಿಕೊಂಡ ಸೈಬರ್ ಕೇಂದ್ರಗಳಿಗೆ ಇ-ಖಾತಾ ವಿತರಿಸಲು ಅನುಮತಿ ನೀಡಲಾಗುವುದು. ಇ-ಖಾತಾ ಪಡೆಯಲು ಅಗತ್ಯವಿರುವ ದಾಖಲೆಗಳನ್ನು ಆಸ್ತಿ ಮಾಲೀಕರಿಂದ ಪಡೆದು ನಿಗದಿತ ವೆಬ್ಸೈಟ್ ನಲ್ಲಿ ಅಪ್ಲೋಡ್ ಮಾಡಿ ನಂತರ ಆ ದಾಖಲೆಗಳನ್ನು ಸಂಬಂಧಿಸಿದ ಅಧಿಕಾರಿಗಳ ಮೂಲಕ ಆನ್ಲೈನ್ ನಲ್ಲಿ ಪರಿಶೀಲಿಸಿ ವೆಬ್ಸೈಟ್ ನಲ್ಲಿ ಇ-ಖಾತಾ ಅಪ್ಲೋಡ್ ಮಾಡಲಾಗುವುದು. ಅದನ್ನು ಸೈಬರ್ ಕೇಂದ್ರದಲ್ಲಿ ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ಇರುತ್ತದೆ ಎಂದು ಹೇಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿಬಿಎಂಪಿಯಿಂದ ಅನುಮತಿ ಪಡೆದ ಸೈಬರ್ ಕೇಂದ್ರಗಳು ಒಂದು ಇ-ಖಾತಾ ದಾಖಲೆ ಅಪ್ಲೋಡ್ ಮತ್ತು ಡೌನ್ಲೋಡ್ ಮಾಡಲು ಆಸ್ತಿ ಮಾಲೀಕರಿಂದ 45 ರೂಪಾಯಿ ಪಡೆಯಲು ಅನುಮತಿಸಲಾಗಿದೆ. ಈ ಪ್ರಕ್ರಿಯೆಗೂ ಮುನ್ನ ಸೈಬರ್ ಕೇಂದ್ರದಲ್ಲಿ ಕೆಲಸ ಮಾಡುವವರಿಗೆ ಸೂಕ್ತ ತರಬೇತಿ ನೀಡಲು ನಿರ್ಧರಿಸಿದೆ. ಇ-ಖಾತಾ ವಿತಣೆಯ ವಿಳಂಬ ತಪ್ಪಿಸಲು ಮತ್ತು ವಿತರಣೆ ಕಾರ್ಯ ಸುಲಭವಾಗಿಸಲು ಖಾಸಗಿ ಸೈಬರ್ ಕೇಂದ್ರಗಳಿಗೆ ಇ-ಖಾತಾ ವಿತರಣೆಗೆ ಅನುಮತಿ ನೀಡಲು ನಿರ್ಧರಿಸಿದ್ದು, ಶೀಘ್ರವೇ ಆದೇಶ ಹೊರಡಿಸಲಾಗುವುದು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular