ಬೆಂಗಳೂರು: ಕೌಟುಂಬಿಕ ಕಲಹದಿಂದಾಗಿ ಪತಿ, ಪತ್ನಿಯ ಮನೆ ಮುಂದೆಯೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಜ್ಞನಭಾರತಿ ಪೊಲೀಸ್ ಠಾಣೆ ವ್ಯಾಪಿಯಲ್ಲಿ ನಡೆದಿದೆ.
ಮಂಜುನಾಥ್ (39) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಎನ್ ಜಿ ಇ ಎಫ್ ಬಡಾವಣೆಯಲ್ಲಿ ವಾಸವಾಗಿದ್ದ ಪತ್ನಿ ನಯನಾಜ್ ಮನೆ ಮುಂದೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ ಮಂಜುನಾಥ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ತುಮಕೂರು ಮೂಲದ ಮಂಜುನಾಥ್ ಕ್ಯಾಬ್ ಚಾಲಕನಾಗಿದ್ದ, ಪತ್ನಿ ನಯನಾರಾಜ್ ಮೇಕಪ್ ಆರ್ಟಿಸ್ಟ್ ಆಗಿದ್ದರು. 2013ರಲ್ಲಿ ವಿವಾಹವಾಗಿದ್ದ ದಂಪತಿಗೆ 9 ವರ್ಷದ ಮಗನಿದ್ದಾನೆ. 2016ರಿಂದ ಎನ್ ಜಿ ಇ ಎಫ್ ಬಡಾವಣೆಯ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದರು. ಕೌಟುಂಬಿಕ ಕಲಹದಿಂದಾಗಿ ಇಬ್ಬರೂ ದೂರವಾಗಿದ್ದರು. ವಿಚ್ಛೇದನ ಕೋರಿ ನಯನಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಹಂತದಲಿರುವಾಗಲೇ ಮಂಜುನಾಥ್ ಪತ್ನಿ ಮನೆಗೆ ಹೋಗಿ ಇನುಂದೆ ತಾನು ಜಗಳವಾಡಲ್ಲ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ವಾಪಾಸ್ ಮನೆಗೆ ಬರುವಂತೆ ಕೇಳಿದ್ದ. ಆದರೆ ಪತಿಯ ಹಿಂಸೆಗೆ ಬೇಸತ್ತಿದ್ದ ನಯನಾ ವಾಪಾಸ್ ಬರಲು ನಿರಾಕರಿಸಿದ್ದಾಳೆ.
ಇದರಿಂದ ಕೋಪಗೊಂಡ ಮಂಜುನಾಥ್, ಪತ್ನಿ ಮನೆ ಬಳಿ ಬಂದು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.