ಬೆಂಗಳೂರು: ರಾಜ್ಯದ ಖಾಸಗಿ ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 1600 ವೈದ್ಯಕೀಯ ಸೀಟು ಹೆಚ್ಚಳಕ್ಕೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಸಮ್ಮತಿಸಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೂ ಸೀಟು ಹೆಚ್ಚಳ ಕುರಿತಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ.
ರಾಜ್ಯದ 16 ಸರ್ಕಾರಿ, 8 ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ವೈದ್ಯಕೀಯ ಸೀಟು ಹೆಚ್ಚಳಕ್ಕೆ ಸ್ಥಳೀಯ ತಪಾಸಣಾ ಸಮಿತಿಗಳಿಂದ ಶಿಫಾರಸು ಮಾಡಲಾಗಿತ್ತು. ಈ ಶಿಫಾರಸ್ಸಿನಲ್ಲಿ ರಾಮನಗರ, ಹುಣಸೂರು, ಕನಕಪುರದ ಹೊಸ ಮೆಡಿಕಲ್ ಕಾಲೇಜುಗಳು ಕೂಡ ಸೇಡಿವೆ.
ಪ್ರಸ್ತುತ ರಾಜ್ಯದ ಸರ್ಕಾರಿ, ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ 11,500 ವೈದ್ಯಕೀಯ ಸೀಟುಗಳು ಲಭ್ಯವಿದ್ದು, ಇವುಗಳಿಗೆ 1,600 ಸೀಟುಗಳು ಸೇರ್ಪಡೆಯಾದಲ್ಲಿ 13,100 ಸೀಟುಗಳು ಲಭ್ಯವಾಗುತ್ತವೆ.