ಚಿತ್ರದುರ್ಗ: ಇದೇ ಜ.23ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಾಣಿವಿಲಾಸ ಜಲಾಶಯಕ್ಕೆ ಗಂಗಾಪೂಜೆ ಹಾಗೂ ಬಾಗಿನ ಸಮರ್ಪಣೆ ಕಾರ್ಯಕ್ರಮಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಆಗದಂತೆ ಸುಗಮ ಸಂಚಾರ ಸಲುವಾಗಿ ಮಾರ್ಗ ಬದಲಾವಣೆ ಮಾಡಲಾಗಿದೆ.
ಹೊಸದುರ್ಗದಿಂದ – ಹಿರಿಯೂರು ಕಡೆಗೆ ಹೋಗುವವರು(ವಿ.ವಿ.ಪುರ ಕಡೆಗೆ ಬರದೇ) ತಳವಾರಹಟ್ಟಿ ಮಾರ್ಗವಾಗಿ ಭರಮಗಿರಿ ಕ್ರಾಸ್ ಮುಖಾಂತರ ರಸ್ತೆಯನ್ನು ಬಳಸಿ ಹಿರಿಯೂರು ಕಡೆಗೆ ಹೋಗುವುದು.
ಹಿರಿಯೂರು ಕಡೆಯಿಂದ – ಹೊಸದುರ್ಗ ಕ್ಕೆ ಹೋಗುವವರು ವಿ.ವಿ.ಪುರ ಕಡೆಗೆ ಹೋಗದೆ ನೇರವಾಗಿ ತಳವಾರಹಟ್ಟಿ ಮಾರ್ಗವಾಗಿ ಹೊಸದುರ್ಗ ಕಡೆಗೆ ಹೋಗುವುದು ಎಂದು ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.