ನವದೆಹಲಿ: ಬೆಂಗಳೂರಿನಲ್ಲಿ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ 4 ವರ್ಷದ ಮಗು ಪತ್ನಿ ನಿಖಿತಾ ಸಿಂಘಾನಿಯಾ ಬಳಿಯೇ ಇರಲಿ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಮೊಮ್ಮಗವನ್ನು ತಮ್ಮ ಸುಪರ್ದಿಗೆ ವಹಿಸಬೇಕು ಎಂದು ಅತುಲ್ ಪೋಷಕರು ಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮಗುವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲು ಸೂಚಿಸಿದೆ.
ನಂತರ ವಿಚಾರಣೆ ನಡೆಸಿದ ನ್ಯಾಯಪೀಠ ಅತುಲ್ ಪತ್ನಿಯ ಬಳಿಗೆ ಮಗುವಿರಲಿ. ಬಾಲಕ ತನ್ನ ಅಜ್ಜ, ಅಜ್ಜಿಯೊಂದಿಗೆ ಕಡಿಮೆ ಸಮಯ ಕಳೆದಿದ್ದಾನೆ. ಮಗು ನಿಖಿತಾ ಸುಪರ್ದಿಯಲ್ಲಿಯೇ ಇರಲಿ ಎಂದು ತಿಳಿಸಿ ಮುಂದಿನ ವಿಚಾರರಣೆಗೆ ಮಗುವನ್ನು ಕೋರ್ಟ್ ಗೆ ಹಾಜರುಪಡಿಸುವಂತೆ ತಿಳಿಸಿದೆ.
ಅತುಲ್ ಸುಭಾಷ್ ಮಗುವನ್ನು ಅಜ್ಜಿಯ ಸುಪರ್ದಿಗೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಅತುಲ್ ಪತ್ನಿಯೇ ಮಗುವಿನ ಲಾಲನೆ ಪಾಲನೆ ಮಾಡಲಿ ಎಂದು ಹೇಳಿದೆ. ಅವರ ತಾಯಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ನೇತೃತ್ವದ ಪೀಠದಿಂದ ಜೀವಗೊಳಿಸಲಾಗಿದೆ. ಮಗು ಎಲ್ಲಿದೆ ಎಂಬುದನ್ನು ಸೊಸೆ ಬಹಿರಂಗಪಡಿಸುತ್ತಿಲ್ಲವೆಂದು ತಾಯಿ ಆರೋಪ ಮಾಡಿದ್ದರು.