ಆನೇಕಲ್: ರಾಜ್ಯದಲ್ಲಿ ಹಾಡ ಹಗಲೇ ದರೋಡೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವೃದ್ಧರೊಬ್ಬರಿಗೆ ಡ್ರಾಪ್ ಕೊಡುವ ನೆಪದಲ್ಲಿ ಕರೆದೊಯ್ದು ಸುತ್ತಿಗೆಯಿಂದ ತಲೆಗೆ ಹೊಡೆದು ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ನಲ್ಲಿ ನಡೆದಿದೆ.
68 ವರ್ಷದ ನಾಗರಾಜ್ ಬಳಿಯಿಂದ ಕಳ್ಳರ ಗ್ಯಾಂಗ್ ಚಿನ್ನಾಭರಣ ದೋಚಿ ಪರಾರಿಯಾಗಿದೆ. ಡ್ರಾಪ್ ಕೊಡುತ್ತೇವೆ ಎಂದು ಕರೆದೊಯ್ದ ಬಳಿಕ ನಾಗರಾಜ್ ಅವರ ತಲೆಗೆ ಸುತ್ತಿಗೆಯಿಂದ ಹೊಡೆದಿದ್ದಾರೆ. ಅವರ ಬಳಿ ಇದ್ದ ಚಿನ್ನಾಭರಣಗಳನ್ನು ರಾಬರಿ ಮಾಡಿ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.
ಆನೇಕಲ್ ತಾಲೂಕಿನ ಸೂರ್ಯಸಿಟಿ ಬಳಿ ಈ ಘಟನೆ ನಡೆದಿದೆ.