ಭೋಪಾಲ್‌ನಲ್ಲಿ ಒಬ್ಬ ಟ್ರಾಫಿಕ್ ಪೊಲೀಸ್ ರಾಜ್ಯಪಾಲರ ಕಾನ್ವಾಯ್ ಗೆ ತುಂಬಾ ಹತ್ತಿರ ನಿಂತಿದ್ದ ವ್ಯಕ್ತಿಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ, ಪೊಲೀಸ್ ಅಧಿಕಾರಿ ಆ ವ್ಯಕ್ತಿಯನ್ನು ನೆಲಕ್ಕೆ ತಳ್ಳಿ, ಹೊಡೆದಿದ್ದು ಕಂಡುಬರುತ್ತದೆ.
ಈ ಘಟನೆ ಆನಂದ ನಗರ ಚೌಕದಲ್ಲಿ ನಡೆದಿದೆ. ಗವರ್ನರ್ ಮಂಗುಭಾಯಿ ಪಟೇಲ್ ಅವರ ಕಾನ್ವಾಯ್ ಅಲ್ಲಿಂದ ಹಾದು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಕಾನ್ವಾಯ್ ಗೆ ಹತ್ತಿರ ನಿಂತಿದ್ದ ವ್ಯಕ್ತಿಯ ಮೇಲೆ ಪೊಲೀಸ್ ಅಧಿಕಾರಿ ಆಕ್ರಮಣ ಮಾಡಿದ್ದಾನೆ. ಆ ವ್ಯಕ್ತಿಯಿಂದ ಯಾವುದೇ ಪ್ರಚೋದನೆ ಇರಲಿಲ್ಲ ಎಂದು ಹೇಳಲಾಗುತ್ತಿದೆ.
ಈ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸನ ಈ ಕೃತ್ಯವನ್ನು ಖಂಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಹೆಚ್ಚುವರಿ ಡಿಸಿಪಿ ವಿಕ್ರಂ ರಾಘುವಂಶಿ, ಗವರ್ನರರ ಕಾನ್ವಾಯ್ ಗೆ ಯಾರು ಹತ್ತಿರ ಬರಬಾರದು ಎಂದು ಹೇಳಿದ್ದಾರೆ. ಗವರ್ನರರ ಕಾನ್ವಾಯ್ ಗೆ Z+ ಭದ್ರತೆ ಇರುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಇರುತ್ತದೆ. ಆ ವ್ಯಕ್ತಿಗೆ ಪೊಲೀಸರು ಎಚ್ಚರಿಕೆ ನೀಡಿದ್ದರೂ ಕೂಡ ಅವರು ಹತ್ತಿರ ಬಂದಿದ್ದಾರೆ ಎಂದು ಹೇಳಿದ್ದಾರೆ.
ಈ ಘಟನೆಯ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಘಟನೆಯ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲಾಗುತ್ತಿದೆ. ಎಸಿಪಿ ಮಟ್ಟದ ಅಧಿಕಾರಿಯೊಬ್ಬರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಡಿಸಿಪಿ ರಾಘುವಂಶಿ ಹೇಳಿದ್ದಾರೆ.
In a shocking display of aggression by those entrusted with public safety, a traffic policeman in #MadhyaPradesh‘s #Bhopal, was caught on camera brutally assaulting a man standing near the Governor’s convoy.
The video, now viral, shows the traffic constable shoving the man to… pic.twitter.com/C4D5Kgk6Cx
— Hate Detector 🔍 (@HateDetectors) January 19, 2025