ತಿರುವನಂತಪುರಂ: ಕೇರಳದ ಎರ್ನಾಕುಲಂನ ಉತ್ತರ ಪರವೂರಿನಲ್ಲಿ ಪಕ್ಕದ ಮನೆಯ ಯುವಕ ಒಂದೇ ಕುಟುಂಬದ ಮೂವರನ್ನು ಮಾರಕಾಸ್ತ್ರಗಳಿಂದ ಥಳಿಸಿ ಹತ್ಯೆ ಮಾಡಿದ್ದಾರೆ. ಆರೋಪಿ ರಿತು ಜಯನ್ ನನ್ನು ಬಂಧಿಸಲಾಗಿದೆ.
ಮನೆಯಲ್ಲಿದ್ದ ನಾಲ್ವರ ಮೇಲೆ ದಾಳಿ ನಡೆಸಲಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ. 65 ವರ್ಷದ ವೇಣು, 62 ವರ್ಷದ ಉಷಾ, 32 ವರ್ಷದ ವಿನಿಶಾ ಸಾವನ್ನಪ್ಪಿದ್ದು, ಜಿತಿನ್ ಸ್ಥಿತಿ ಗಂಭೀರವಾಗಿದೆ. ಹಲವು ದಿನಗಳಿಂದ ಕಿರಿಕ್ ಮಾಡುತ್ತಿದ್ದ ಪಕ್ಕದ ಮನೆಯ ಯುವಕ ಜಯನ್ ಕೃತ್ಯವೆಸಗಿದ್ದಾನೆ.
ಉತ್ತರ ಪರವೂರಿನ ಚೆಂದಮಂಗಲಂನಲ್ಲಿ ಘಟನೆ ನಡೆದಿದ್ದು, ಗಾಯಗೊಂಡ ಜಿತಿನ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರೂ ಚೆಂದಮಂಗಲಂ ಪಂಚಾಯತ್ನ ಕಿಝಕ್ಕುಂಪುರಂ ವಾರ್ಡ್ ನಿವಾಸಿಗಳಾಗಿದ್ದಾರೆ.