ನವದೆಹಲಿ: ಪೂರ್ವ ದೆಹಲಿಯ ಘಾಜಿಪುರ ಪ್ರದೇಶದಲ್ಲಿ ಕಾರ್ ನಲ್ಲಿದ್ದ 24 ವರ್ಷದ ಯುವಕ ಬೆಂಕಿ ತಗುಲಿ ಸುಟ್ಟು ಕರಕಲಾದ ಘಟನೆ ನಡೆದಿದೆ.
ಜನವರಿ 18-19ರ ಮಧ್ಯರಾತ್ರಿ ಈ ದುರದೃಷ್ಟಕರ ಘಟನೆ ನಡೆದಿದೆ. ಮೃತನನ್ನು ಅನಿಲ್ ಎಂದು ಗುರುತಿಸಲಾಗಿದೆ.
ಗಾಜಿಪುರದ ಗೆಳತಿಯ ಮದುವೆ ನಡೆಯುತ್ತಿದ್ದ ಬ್ಯಾಂಕ್ವೆಟ್ ಹಾಲ್ ಹೊರಗೆ ಬೆಂಕಿಯಲ್ಲಿ ಕಾರ್ ನಲ್ಲಿ ಅವರು ಮೃತಪಟ್ಟಿರುವುದು ಪತ್ತೆಯಾಗಿದೆ.
ಮಾಹಿತಿ ಪಡೆದ ಕೂಡಲೇ, ಸಬ್-ಇನ್ಸ್ ಪೆಕ್ಟರ್ ಪ್ರದೀಪ್, ಹೆಡ್ ಕಾನ್ ಸ್ಟೆಬಲ್ ಜಿತೇಂದರ್ ಅವರೊಂದಿಗೆ ಸ್ಥಳಕ್ಕೆ ತಲುಪಿದ್ದಾರೆ. ಅಲ್ಲಿ ಕಾರ್ ಸಂಪೂರ್ಣವಾಗಿ ಬೆಂಕಿಯಿಂದ ಆವರಿಸಿತ್ತು. ತಪಾಸಣೆ ನಡೆಸಿದ ನಂತರ, ಶವವನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಗೆ ಕಳುಹಿಸಲಾಯಿತು.
ಅನಿಲ್ ಒಬ್ಬ ಹುಡುಗಿಯ ಜೊತೆ ಸಂಬಂಧ ಹೊಂದಿದ್ದ. ಆದರೆ ಆಕೆಯ ತಂದೆ ಅವರ ಮದುವೆಗೆ ನಿರಾಕರಿಸಿದ್ದರು ಎಂದು ಘಟನೆಯ ಹಿನ್ನೆಲೆ ಬಗ್ಗೆ ಮಾಹಿತಿ ನೀಡಿದ ಪೊಲೀಸರು ತಿಳಿಸಿದ್ದಾರೆ.
ಘಟನೆಯ ರಾತ್ರಿ, ಹುಡುಗಿಯ ವಿವಾಹವನ್ನು ಬಾಬಾ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಸಲಾಗಿತ್ತು. ಅನಿಲ್ ಬಹುಶಃ ಪರಿಸ್ಥಿತಿಯನ್ನು ಎದುರಿಸುವ ಉದ್ದೇಶದಿಂದ ಅಲ್ಲಿಗೆ ಆಗಮಿಸಿದ್ದರು. ಸಾರ್ವಜನಿಕರು ಕಾರಿನ ಗಾಜು ಒಡೆದು ಅನಿಲ್ ಅನ್ನು ಹೊರಗೆಳೆಯಲು ಪ್ರಯತ್ನಿಸಿದರು, ಆದರೆ ಆ ಹೊತ್ತಿಗೆ, ಅವನು ತೀವ್ರವಾಗಿ ಸುಟ್ಟುಹೋಗಿದ್ದ. ಹುಡುಗಿ ಮತ್ತು ಅನಿಲ್ ಅವರ ಎರಡೂ ಕುಟುಂಬಗಳು ಸಂಬಂಧ ಹೊಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.. ಅನಿಲ್ ಸಾವಿನ ಬಗ್ಗೆ ಸೋದರರು ಅನುಮಾನ ವ್ಯಕ್ತಪಡಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.