ಮಂಗಳೂರು: ಬೀದರ್ ಬಳಿಕ ಮಂಗಳೂರಿನಲ್ಲಿಯೂ ಹಾಡ ಹಗಲೇ ಬ್ಯಾಂಕ್ ದರೋಡೆ ನಡೆದಿದ್ದು, ಕೇವಲ 17 ಸೆಕೆಂಡ್ ನಲ್ಲಿ ದರೋಡೆಕೋರರು ಹಣ, ಚಿನ್ನಾಭರಣ ಲೂಟಿ ಮಾಡಿಕೊಂಡು ಎಸ್ಕೇಪ್ ಆಗಿದ್ದಾರೆ.
ಮಂಗಳೂರು ಬಳಿಯ ಉಳ್ಳಾಲದ ಕೋಟೆಕಾರು ಸಹಕಾರಿ ಬ್ಯಾಂಕ್ ನಲ್ಲಿ ಇಂದು ಬೆಳಿಗ್ಗೆ ಐವರು ದರೋಡೆಕೋರರು ಬ್ಯಾಂಕ್ ಗೆ ನುಗ್ಗಿ, ಬಂದೂಕು ಹಿಡಿದು ಬೆದರಿಸಿ ಬ್ಯಾಂಕ್ ನಲ್ಲಿದ್ದ ನಗದು ಹಣ, ಚಿನ್ನಾಭರನಗಳನ್ನು ಚೀಲದಲ್ಲಿ ತುಂಬಿಕೊಂಡು ಪರಾರಿಯಾಗಿದ್ದಾರೆ. ಬ್ಯಾಂಕ್ ನಿಂದ ಚೀಲದಲ್ಲಿ ಹಣ, ಚಿನ್ನಾಭರಣ ತುಂಬಿಕೊಂಡು ಬಂದು ರಸ್ತೆಯಲ್ಲಿ ನಿಂತಿದ್ದ ಕಾರಿನಲ್ಲಿ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾರೆ. ಕೇವಲ 17 ಸೆಕೆಂಡ್ ಗಳಲ್ಲಿ ದರೋಡೆಕೋರರು ಹಣ, ಚಿನ್ನಾಭರಣಗಳ ಸಮೇತ್ ಎಸ್ಕೇಪ್ ಆಗಿದ್ದು, ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಬ್ಯಾಂಕ್ ನಲ್ಲಿದ್ದ 10-12 ಲಕ್ಷ ರೂ ಮೌಲ್ಯದಷ್ಟು ಹಣ, ಚಿನ್ನಾಭರಣಗಳನ್ನು ಕಳ್ಳರು ದೋಚಿದ್ದಾರೆ ಎನ್ನಲಾಗಿದೆ. ಬ್ಯಾಂಕ್ ನಲ್ಲಿ ಒಬ್ಬನೇ ಒಬ್ಬ ಸೆಕ್ಯೂರಿಟಿ ಕೂಡ ಇರಲಿಲ್ಲ. ಐದರಿಂದ ಆರು ಸಿಬ್ಬಂದಿಗಳು ಬ್ಯಾಂಕ್ ನಲ್ಲಿದ್ದರು. ಈ ವೇಳೆ ಏಕಾಏಕಿ ನುಗ್ಗಿದ ಗ್ಯಾಂಗ್ ಕಳ್ಳತನ ಮಾಡಿ ಪರಾರಿಯಾಗಿದೆ.